ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ – ದಲಿತರಿಗೆ ಕಿರುಕುಳ ನೀಡುದ್ದು ಎಷ್ಟು ಸರಿ….?
ಮೂಗನೂರ ಮಾ.06





ಮೂಗನೂರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ದಿನಾಂಕ 03/03/2025 ಸೋಮವಾರ ರಂದು ನಮ್ಮ ಗ್ರಾಮ ಪಂಚಾಯಿತಿಯಲ್ಲಿ 5 ನೇ. ಸಾಮಾನ್ಯ ಸಭೆ ಕರೆಯಲಾಗಿತ್ತು. ಸದರಿ ಸಭೆಯು ಸಮಯ ಸುಮಾರು 12:10 ಗಂಟೆಗೆ ಸಭೆ ಪ್ರಾರಂಭಿಸಲಾಯಿತು. ಸದರಿ ಸಭೆಯಲ್ಲಿ ಸಭೆಯ ನೋಟಿಸ್ ಪ್ರಕಾರ ಚರ್ಚಿಸ ಬೇಕಾದ ವಿಷಯಗಳನ್ನು ನಾನು ಗ್ರಾಮ ಪಂಚಾಯತ ಗ್ರೇಡ್-1 ಕಾರ್ಯದರ್ಶಿಯಾಗಿ ನಿಯಮಾನುಸಾರ ಸ್ವಾಗತ ಮಾಡಿ ಸಭೆಯನ್ನು ನಡೆಸುತ್ತಿದ್ದೆ. ಆದರೆ ಪಿ.ಡಿ.ಓ. ಅವರು ಚರ್ಚಿಸಬೇಕಾದ ವಿಷಯಗಳನ್ನು ಅರ್ಧಕ್ಕೆ ಮೊಟುಕು ಗೊಳಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪಡಿಯಪ್ಪ ಮುಳ್ಳೂರ ಇವರು ಇಲ್ಲಿಯವರಗೆ ವರ್ಗ-1 ಕ್ಯಾಶ್ ಬುಕ್ ಪ್ರಕಾರ ಬ್ಯಾಂಕಿಗೆ ಜಮಾ ಮಾಡದೆ ಶಿಲ್ಕು ಮೊತ್ತ ಸುಮಾರು 7-8 ಲಕ್ಷ ರೂ. ಇರುತ್ತದೆ ಸದರಿ ಮೊತ್ತವನ್ನು ಕಾರ್ಯದರ್ಶಿಯವರು ವಸೂಲಿ ಹಣವನ್ನು ದುರ್ಬಳಕೆ ಮಾಡಿದ್ದಾನೆ ಎಂಬ ವಿಷಯವನ್ನು ಸಭೆಯ ಸೂಚನಾ ಪತ್ರದಲ್ಲಿ ಇಲ್ಲದಿದ್ದರೂ ಕೂಡ ಸಭೆಯ ಮುಂದೆ ದುರುದ್ದೇಶ ಪೂರ್ವಕವಾಗಿ ಮಂಡಿಸಿ ನನಗೆ ಹಣ ದುರ್ಬಳಕೆ ಮಾಡಿದ್ದಾನೆ ಎಂದು ಸುಳ್ಳು ಆರೋಪ ನೀಡಿ ಸಭೆಯ ಮುಂದೆ ನನಗೆ ಅವಮಾನ ಮಾಡಿ ಮಾನ ಮರ್ಯಾದಿ ತೆಗೆದಿದ್ದಾನೆ ಮತ್ತು ನನ್ನ ಸರಕಾರಿ ಕೆಲಸದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ನಿಯಮದ ಪ್ರಕಾರ ಯಾವ ಹಣ ಯಾವಾಗ ದುರ್ಬಳಕೆ ಮಾಡಿ ಕೊಂಡೆ ಎಂಬುದರ ಬಗ್ಗೆ ಇಲ್ಲಿಯವರೆಗೆ ನನಗೆ ಯಾವುದೇ ರೀತಿಯ ಲಿಖಿತ ನೋಟಿಸ್ ನೀಡದೆ ಏಕಾ ಏಕಿಯಾಗಿ ದುರದ್ದೇಶದಿಂದ ನನ್ನ ಮೇಲೆ ತನ್ನ ಅಧಿಕಾರ ಧರ್ಪದಿಂದ ಸಭೆಯ ಮುಂದೆ ನನಗೆ ಮಾನ ಭಂಗ ಮಾಡಿ ಅವಮಾನಿಸಿದ್ದಾರೆ. ಸದರಿ ದುರ್ಬಳಕೆ ಮೊತ್ತವನ್ನು ನಾನೇ ಬಳಸಿದ್ದೇನೆ ಎಂದು ಒಪ್ಪಿ ಕೊಳ್ಳಬೇಕೆಂದು ಸದಸ್ಯರ ಮುಂದೆ ಒತ್ತಡ ಏರುತ್ತಿದ್ದು ಆ ದೃಶ್ಯಾವಳಿಯನ್ನು ತನ್ನ ಮೊಬೈಲನಿಂದ ಗೌಪ್ಯವಾಗಿ ಆಡಿಯೋ ಹಾಗೂ ವಿಡಿಯೋ ರೆಕಾರ್ಡ ಮಾಡಿ ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಗೆ ಹಾಗೂ ಸಾಮಾಜಿಕ ಜಾಲ ತಾಣಗಳಿಗೆ ರವಾನೆ ಮಾಡಿದ್ದಾನೆ. ಪಂಚಾಯತಿಯಲ್ಲಿ ಚರ್ಚಿಸುವ ವಿಷಯವನ್ನು ಅಂದರೆ ಹಣ ದುರ್ಬಳಕೆ ವಿಷಯದ ಬಗ್ಗೆ ಮಾತ್ರ ಲೈವ್ ಇಟ್ಟು ನನ್ನ ಮಾನ ಮರ್ಯಾದೆ ತೆಗಿದಿದ್ದಾನೆ ನನಗೆ ತನ್ನ ಅಧಿಕಾರ ಗರ್ವದಿಂದ ಅಸಂವಿಧಾನಿಕ ಶಬ್ದಗಳನ್ನು ಬಳಸಿ ಜಾತಿ ನಿಂದಣೆ ಮಾಡಿ ನನ್ನ ಮೇಲೆ ನಿಯಮ ಬಾಹಿರವಾಗಿ ಅಧಿಕಾರ ಚಲಾಯಿಸುತ್ತಿದ್ದಾನೆ. ನನಗೆ ಸರಕಾರ ನೇಮಿಸಿದ ಜಾಬ್ ಚಾರ್ಟ್ ಪ್ರಕಾರ ಪ್ರಮುಖ ಕರ್ತವ್ಯಗಳಾದ ಇ-ಸ್ವತ್ತು ಲಾಗಿನ್, ಪಂಚತಂತ್ರ -2 ಲಾಗಿನ್ ಹಾಗೂ ವಾರ್ಸಾ ವಾಟ್ನಿ ಅರ್ಜಿಗಳ ಬಗ್ಗೆ ಮಾಡಬೇಕಾದ ಕೆಲಸ, ಠರಾವು ಪುಸ್ತಕ ನಿರ್ವಹಣೆ, ನಮೂನೆ -9 ರಿಜಿಸ್ಟರ್ ನಿರ್ವಹಣೆ ಇತ್ಯಾದಿ ಗ್ರೇಡ್-1 ಕಾರ್ಯದರ್ಶಿಯ ಜವಾಬ್ದಾರಿ ಕೆಲಸಗಳನ್ನು ಉದ್ದೇಶ ಪೂರ್ವಕವಾಗಿ ಪಿ.ಡಿ.ಓ ರವರು ಅಧಿಕಾರ ದರ್ಪದಿಂದ ನಿಯಮ ಬಾಹಿರವಾಗಿ ಪಿ.ಡಿ.ಓ ತಂಬ್ ರಜಿಸ್ಟ್ರೇಷನ್ ಮಾಡಿ ರೋಲ್ ಮಾಡಿ ಕೊಂಡು ಅಕ್ರಮವಾಗಿ 7-8 ತಿಂಗಳಿಂದ ಕಾರ್ಯದರ್ಶಿಯ ಅಧಿಕಾರವನ್ನು ಸ್ವತ ಪಿ.ಡಿ.ಓ ರವರೆ ಚಲಾಹಿಸಿದ್ದಲ್ಲದೆ. ಇದನ್ನು ನಾನು ಪ್ರಶ್ನಿಸಿದರೆ ತುಂಬಾ ತೊಂದರೆ ಹಿಂಸೆ ಕೊಡುತ್ತಾ ಸುಮಾರ 7-8 ತಿಂಗಳಿಂದ ಗ್ರೇಡ-1 ಕಾರ್ಯದರ್ಶಿ ಯಾಗಿ ಸರ್ಕಾರಿ ಕೆಲಸ ನಿರ್ವಹಿಸುವಲ್ಲಿ ಅಡೆ-ತಡೆ ಮಾಡುವುದು. ಕರ್ತವ್ಯ ನಿರ್ವಹಿಸುವಾಗ ಕಿರುಕುಳ ನೀಡುತ್ತಾ ನನ್ನ ಮೇಲೆ ದೌರ್ಜನ್ಯ ಏಸುಗುತ್ತಿದ್ದಾರೆ. ನೀನು ಈಗಲೇ ಪಂಚಾಯಿತಿ ಬಿಟ್ಟು ಹೋಗಬೇಕು ಇಲ್ಲದಿದ್ದರೆ ನಾನು ಇದೆ ಊರಿನವನು ಪಂಚಾಯತ ನನ್ನ ಊರಿನಲ್ಲಿದೆ ನನ್ನ ಸಂಬಂಧಿಕರಿಂದ ನಿನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಸಿ ನಿನ್ನನ್ನು ಕ್ಷಣಾರ್ಧದಲ್ಲಿ ಈ ಪಂಚಾಯಿತಿಯಿಂದ ಓಡಿಸುವ ಅಧಿಕಾರ ನನಗಿದೆ ಎಂದು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಆರೋಗ್ಯದಲ್ಲಿ ಏರು ಪೇರು ಆಗುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ನನಗೆ ಆದ ಅನ್ಯಾಯಕ್ಕೆ ನ್ಯಾಯ ಕೋಡಿಸ ಬೇಕೆಂದು ಈ ಮೂಲಕ ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.