ವಿಘ್ನ ನಿವಾರಕನಿಗೆ ಚಿಲ್ಲರೆ ಕ್ವಾಯಿನ್ – ಹಾರ ಸಮರ್ಪಣೆ.
ಗೊರಬಾಳ ಆ.30





ಇಳಕಲ್ಲ ತಾಲೂಕಿನ ಸಮೀಪದ ಗೊರಬಾಳ ಗ್ರಾಮದ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಬೃಹದಾಕಾರದ ಗಣೇಶನ ಮೂರ್ತಿಗೆ ಸಂಘದ ಸದಸ್ಯ ವಿಜಯಕುಮಾರ. ಶರಣಯ್ಯ. ಹಿರೇಮಠ. ಎಂಬ ಯುವಕ ಗಣೇಶನಿಗೆ ಎರಡು ರೂಪಾಯಿ ಕ್ವಾಯಿನ್ ಗಳಲ್ಲಿ ತಯಾರಿಸಿದ ಚಿಲ್ಲರೆ ಕ್ವಾಯಿನಗಳ ಹಾರವನ್ನು ಗಣೇಶನಿಗೆ ಸಮರ್ಪಣೆ ಮಾಡಿದರು.ತಮಿಳುನಾಡಿನ ಚೈನೈನಲ್ಲಿ ತಯಾರಿಸಿದ ಈ ಹಾರವನ್ನು ಆರ್ಡರ್ ಕೊಟ್ಟು ತರಿಸಿ ಹಾಕಲಾಗಿದ್ದು ಈ ಆಹಾರವನ್ನು ನಿರಂತರವಾಗಿ ಗಣೇಶನಿಗೆ ಹಾಕಬಹುದು ಎಂದು ಹಾರ ತಯಾರಕರು ತಿಳಿಸಿರುತ್ತಾರೆ.

ತಮ್ಮ ಸಂಘದ ಪ್ರತಿಷ್ಠಾಪನೆ ಮಾಡಿದ ಗಣೇಶನಿಗೆ ಕ್ವಾಯಿನಗಳ ಹಾರ ಹಾಕುತ್ತೇನೆ ಎಂದು ಸಂಕಲ್ಪ ಮಾಡಿದ್ದಕ್ಕಾಗಿ ಈ ಹಾರವನ್ನು ತಯಾರಿಸಿ ಹಾಕಿರುತ್ತೇನೆ ಎಂದು ಹೇಳಿದರು.ಎಲ್ಲರೂ ಗಣೇಶನಿಗೆ ಮುತ್ತಿನ ಹಾರ ಹೂವಿನ ಹಾರ ಹಾಕುವ ಪರಂಪರೆ ಇದ್ದು ವಿಶೇಷವಾದ ಹಾರ ಹಾಕಬೇಕೆಂದು ಮನಸ್ಸಿನಲ್ಲಿ ಅಂದು ಕೊಂಡಿದ್ದ ಪ್ರಯುಕ್ತ ಕ್ವಾಯಿನ್ ಹಾರವನ್ನು ತರಿಸಿ ಹಾಕಲಾಗಿದೆ ಎಂದು ಹೇಳಿದರು.
ಹವ್ಯಾಸಿ ಬರಹಗಾರರು:ಜಗದೀಶ್.ಗಿರಡ್ಡಿ.ಗೊರಬಾಳ ಇಲಕಲ್ಲ