ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ಶ್ರೀಶಾರದಾಶ್ರಮದ – ಸದ್ಭಕ್ತರಿಂದ ಗಣೇಶ ಭಜನೆ.
ಚಳ್ಳಕೆರೆ ಆ.31

ನಗರದ ಬಿ.ಇ.ಓ ಕಛೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದಿಂದ ಕೂರಿಸಿರುವ ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತ ವೃಂದದಿಂದ “ವಿಶೇಷ ಗಣೇಶ ಭಜನಾ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮಧ್ಯೆ ಶ್ರೀಶಾರದಾಶ್ರಮ ಬೆಳೆದು ಬಂದ ದಾರಿಯ ಬಗ್ಗೆ ಸದ್ಭಕ್ತರಾದ ಶ್ರೀಮತಿ ಬಿ.ಸುಮನಾ ಕೋಟೇಶ್ವರ ಅವರು ವಿಶೇಷ ಮಾಹಿತಿ ನೀಡಿದರು. ಭಜನಾ ಸಂಕೀರ್ತನೆಯಲ್ಲಿ ಉಪ್ಪಾರಹಟ್ಟಿ ಈರಣ್ಣ, ಶುಭ ಸುರೇಶ್, ಮಧುಮತಿ, ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಎಂ.ಗೀತಾ ನಾಗರಾಜ್, ಪ್ರೇಮಲೀಲಾ, ವನಜಾಕ್ಷಿ ಮೋಹನ್.

ಯತೀಶ್.ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕೆ.ಎಸ್ ವೀಣಾ, ಮಂಜುಳ ಉಮೇಶ್, ನಾಗರತ್ನಮ್ಮ, ಕವಿತಾ, ವೀರಮ್ಮ, ವಿಜಯಲಕ್ಷ್ಮೀ, ಸಂಗೀತ, ರಶ್ಮಿ ವಸಂತ, ಶೈಲಜ, ಕೃಷ್ಣವೇಣಿ, ರಶ್ಮಿ ರಮೇಶ್, ಕಾಲುವೆಹಳ್ಳಿ ಪಾಲಕ್ಕ, ಬೋರಕ್ಕ, ವಿಶಾಲಾಕ್ಷಿ ಪುಟ್ಟಣ್ಣ, ಸುಜಾತ ಬಸವರಾಜ್,ಉಷಾ ಶ್ರೀನಿವಾಸ್, ಮಂಗಳಾ, ಕಾವ್ಯ, ಮಾನ್ಯ, ಪ್ರತೀಕ್ಷಾ, ಯಶಸ್ವಿ, ಯುಕ್ತ, ಕಿಶನ್ ಆಚಾರ್ಯ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.