ಖಾಸಗಿ ಕಾಲೇಜು ಉಪನ್ಯಾಸಕರ ಸಂಘದಿಂದ – ಕ್ರಿಕೆಟ್ ಪಂದ್ಯಾವಳಿ ಆಯೋಜನೆ.
ಮಾನ್ವಿ ಆ.31

ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಖಾಸಗಿ ಕಾಲೇಜು ಉಪನ್ಯಾಸಕರ ಸಂಘದಿಂದ ಕ್ರಿಕೇಟ್ ಪ್ರೀಮೀಯರ್ ಲೀಗ್ ಪಂದ್ಯಾವಳಿಗೆ ಜೆಡಿಎಸ್ ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ ಹಾಗೂ ಜೀಶಾನ್ ಚಾಲನೆ ನೀಡಿದರು.
ಉಪನ್ಯಾಸಕರು ಪಿಯು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರಲ್ಲೆ ನಿತ್ಯ ಕಾಯಕ ಮಾಡುತ್ತಿರುತ್ತಾರೆ. ಇದರ ನಡುವೆ ಉಪನ್ಯಾಸಕರಲ್ಲಿಯೇ ಒಂದು ಕ್ರೀಡಾ ಮನೋಭಾವನೆ ಇರಲಿ ಎಂಬ ಕಾರಣಕ್ಕಾಗಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ ನಸ್ಲಾಪೂರ ತಿಳಿಸಿದರು.
ಪಂದ್ಯಾವಳಿ ಎರಡು ದಿನದ ವರೆಗೂ ನಡೆಯಲಿದ್ದು, ಇದರಲ್ಲಿ ಸರಕಾರಿ ಕಾಲೇಜು ಉಪನ್ಯಾಸಕರು ಹಾಗೂ ಖಾಸಗಿ ಉಪನ್ಯಾಸಕರು ಭಾಗಿಯಾಗಿ ಆಯಾ ಕಾಲೇಜಿ ನವರು ತಂಡವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ