ಸಮಾಜ ಕಲ್ಯಾಣ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಸೌಲಭ್ಯ ವಂಚಿತ ಎಸ್,ಸಿ/ಎಸ್,ಟಿ ವಿದ್ಯಾರ್ಥಿಗಳು – ಶಿವಾನಂದ ಹರಿಜನ ಆರೋಪ.
ವಿಜಯಪುರ ಸ.01





ಜಿಲ್ಲಾ ಸಮಾಜ ಕಲ್ಯಾಣ ಅಧೀನದಲ್ಲಿರುವ ಒಟ್ಟು 09 ಪ್ರತಿಷ್ಠಿತ ಶಾಲೆಗಳಿವೆ. ಈ ಶಾಲೆಗಳಿಗೆ ಇಲಾಖೆಯ ವತಿಯಿಂದ ಪ್ರತಿ ವರ್ಷ 5 ನೇ. ತರಗತಿ ಓದುತ್ತಿರುವ ಎಸ್,ಸಿ/ಎಸ್,ಟಿ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಇಲಾಖೆಯು ಅರ್ಜಿ ಆವ್ಹಾನಿಸಿ ಅವರಿಗೆ ಜಿಲ್ಲಾವಾರು ಸಿ.ಇ.ಟಿ ಪರೀಕ್ಷೆ ನಡೆಸಿ, ಅರ್ಹ ವಿದ್ಯಾಥಿ೯ಗಳನ್ನು ಮೇರಿಟ್ ಮೂಲಕ ಆಯ್ಕೆ ಸಮಿತಿಯು ಸಂಬಂಧಿಸಿದ ಪ್ರತಿಷ್ಠಿತ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ (6 ರಿಂದ 10 ನೇ. ಅಥವಾ 12 ನೇ.) ಪ್ರವೇಶ ಪಡೆಯುವಂತೆ ವ್ಯವಸ್ಥೆ ಮಾಡುತ್ತಾರೆ. ಆದರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆಂದೇ ಸರಕಾರ ಸಾಕಷ್ಟು ಹಣ ಆಯಾ ವಿದ್ಯಾರ್ಥಿಗಳ ಪರವಾಗಿ ಆಯಾ ಶಾಲೆಗಳಿಗೆ ಸಂದಾಯ ಮಾಡುತ್ತದೆ. ಆದರೆ ವಿದ್ಯಾರ್ಥಿಗಳ ದುರ್ದೈವ ಆಯಾ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ವರ್ಷ, ಒಂದು ಬಾರಿ ಮಾತ್ರ ಸಮವಸ್ತ್ರ ಕೊಡುತ್ತಾರೆ. ಎರಡನೇ ವರ್ಷ ಇಲ್ಲ. ಇದೊಂದೇ ಸೌಲಭ್ಯ. ಇತರೆ ಯಾವುದೇ ಸೌಲಭ್ಯ ಕೊಡುವುದಿಲ್ಲ. ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಪಾಲಕರು ಕೇಳಿದಾಗ ಅವರು ಹೇಳೋದು ಸಮವಸ್ತ್ರಗಳು, ನೋಟ್ ಪುಸ್ತಕ, ಕೊಬ್ಬರಿ ಎಣ್ಣೆ, ಪೆನ್ನು, ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಸಲಕರಣೆಗಳು ಕೊಡಬೇಕು ಅಂತಾ ಹೇಳುತ್ತಾರೆ. ಆದರೆ ಪ್ರತಿಷ್ಠಿತ ಕೆಲವು ಶಾಲೆಗಳ ಇಂತಹ ಪ್ರತಿಭಾವಂತ ಎಸ್,ಸಿ/ಎಸ್,ಟಿ ವಿದ್ಯಾರ್ಥಿಗಳಿಗೆ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿವೆ. ದಯವಿಟ್ಪು ಸಮಾಜ ಕಲ್ಯಾಣ ಅಧಿಕಾರಿಗಳು ಆಯಾ ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ, ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ತಾವು ಶಾಲೆಗಳ ಸಮಿತಿ ಯವರೊಂದಿಗೆ ಅನ್ಯಾಯವಾಗಿ ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ. ಮೊದಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ. ನಂತರ ಆಯಾ ಪ್ರತಿಷ್ಠಿತ ಶಾಲೆಗಳ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯ ವಾಗುತ್ತದೆ ಎಂದು ಜಿಲ್ಲಾ ಆರ್.ಪಿ.ಆಯ್ (ಅಂಬೇಡ್ಕರ್) ಘಟಕದ ಸಂಘಟನಾ ಸಂಚಾಲಕರಾದ ಶಿವಾನಂದ ಹರಿಜನ ಅವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಪತ್ರಿಕಾ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ