ಶ್ರೀ ಗಜಾನನ ಮಹಾ ಮಂಡಳಿ ಇವರ ವತಿಯಿಂದ 11 ನೇ. ದಿನಕ್ಕೆ – 9 ಗಣೇಶ ಮೂರ್ತಿಗಳನ್ನು ಏಕಕಾಲಕ್ಕೆ ವಿಸರ್ಜನೆ ಮಾಡಲಾಗುವುದು.
ಕಲಕೇರಿ ಸ.01

ತಾಳಿಕೋಟಿ ತಾಲೂಕಿನ ಈ ವರ್ಷ ಕಲಕೇರಿ ನಗರದಲ್ಲಿ ಶ್ರೀ ಗಜಾನನ ಮಹಾ ಮಂಡಳಿ ಇವರ ವತಿಯಿಂದ 11 ನೇ. ದಿನಕ್ಕೆ 9 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ದಿನಾಂಕ: 6/9/2025 ರಂದು ಶನಿವಾರ ದಂದು ಒಂಬತ್ತು ಗಣೇಶ ಮೂರ್ತಿಗಳನ್ನು ಏಕಕಾಲಕ್ಕೆ ವಿಸರ್ಜನೆ ನಡೆಸಲಾಗುವುದು ಎಂದು ಗ್ರಾಮದ ಯುವ ಜನರು ಊರಿನ ಪ್ರಮುಖರು ಹಾಗೂ ಜಾತಿ ಮತ ವೆನ್ನದೆ ಎಲ್ಲಾರು ಸೇರಿ ಗಣೇಶ ಮೂರ್ತಿಗಳನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುವದರಿಂದ ಕಲಕೇರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ನಮ್ಮ ಊರು ಮಾದರಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಗಣೇಶ ವಿಸರ್ಜನೆ ಆಯೋಜನೆ ಮಾಡಲಾಗಿದೆ. ಆದ್ದರಿಂದ ಸುತ್ತ ಮುತ್ತಲಿನ ಹಳ್ಳಿಯ ಜನರು ಹಾಗೂ ಕಲಕೇರಿ ಗ್ರಾಮದ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಬೇಕು ಎಂದು. ಮಹಾ ಮಂಡಳಿಯ ಗೌರವ ಅಧ್ಯಕ್ಷರಾದ. ಸಂಗಾರೆಡ್ಡಿ ದೇಸಾಯಿ. ಅಧ್ಯಕ್ಷರಾದ ಎಂ.ಪಿ ನದಾಫ್. ಉಪಾಧ್ಯಕ್ಷರಾದ ವಿಶ್ವನಾಥ ಸಬರದ. ಕಾರ್ಯದರ್ಶಿಗಳಾದ ಹಣಮಂತ ವಡ್ಡರ. ಖಜಾಂಚಿಗಳಾದ ಅಪ್ಪು.ದೇಸಾಯಿ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ