ಗಣೇಶನ ಅಂಗ-ಪ್ರತ್ಯಾಂಗಗಳು ತಿಳಿಸುವ ಸಂದೇಶಗಳ ಅನುಸರಣೆ ಮಾಡಬೇಕು – ಭಕ್ತರಿಗೆ ಮಾತಾಜೀ ತ್ಯಾಗಮಯೀ ಕರೆ.
ಚಳ್ಳಕೆರೆ ಸ.01

ಭಗವಾನ್ ಗಣೇಶನ ಅಂಗ ಪ್ರತ್ಯಾಂಗಳು ತಿಳಿಸುವ ಸಂದೇಶಗಳ ಅನುಸರಣೆ ಮಾಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಭಕ್ತರಿಗೆ ಕರೆ ನೀಡಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಗಣೇಶ ಚತುರ್ಥಿಯ” ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ‘ಗಣೇಶನ ಗುಣ ವಿಶೇಷತೆ’ ಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಗಣೇಶನ ಸಣ್ಣ ಕಣ್ಣು ಅಂತರ್ ಮುಖತೆಯನ್ನು ತಿಳಿಸಿದರೆ ದೊಡ್ಡ ಕಿವಿ ಹೆಚ್ಚು ಕೇಳಬೇಕು ಎಂದು ತಿಳಿಸುತ್ತದೆ. ಬಾಯಿ ಮುಚ್ಚಿರುವ ಸೊಂಡಿಲು ಕಡಿಮೆ ಮಾತನಾಡಬೇಕು ನಾಲಿಗೆಯ ಮೇಲೆ ನಿಯಂತ್ರಣವಿರ ಬೇಕು ಎಂಬ ಸಂದೇಶ ನೀಡುತ್ತದೆ.

ಆದ್ದರಿಂದ ಅವನ ದೇಹದ ಪ್ರತಿಯೊಂದು ಅಂಗದ ರಚನೆಯ ಹಿನ್ನಲೆಯ ಮಹತ್ವವನ್ನು ತಿಳಿದು ಕೊಂಡು ಅನುಸರಿಸ ಬೇಕು ಎಂದು ಮಾತಾಜೀ ತಿಳಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸಾಮೂಹಿಕ ಶ್ರೀಗಣೇಶನ ಭಜನೆಗಳು” ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್, ಯತೀಶ್.ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ವೆಂಕಟಲಕ್ಷ್ಮೀ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ನಾಗರತ್ನಮ್ಮ, ಕೆ.ಎಸ್ ವೀಣಾ, ಮಂಜುಳ ಉಮೇಶ್, ಕಾವೇರಿ ಸುರೇಶ್, ಪಂಕಜ ಚೆನ್ನಪ್ಪ, ರಶ್ಮಿ ವಸಂತ, ಯಶಸ್ವಿ, ಚೇತನ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.