ವೀರ ವನಿತೆಯರು ಹುಟ್ಟಿದ ನಾಡು ನಮ್ಮ – ನಾಡು ಕನ್ನಡ ನಾಡು.
ಇಂಡಿ ಸ.01

ಮಹಿಳೆ ಅಬಲೆಯಲ್ಲ ಸಬಲೆ ಎಂಬ ನಾಣ್ಣುಡಿಯಂತೆ ಮಹಿಳೆಯರು ಪುರುಷರಿಗೆ ಸರಿ ಸಮಾನರು ಎಂದು ತೋರಿಸಿ ಕೊಟ್ಟ ಇಂಡಿ ಪಟ್ಟಣದ ಬೀರಪ್ಪ ನಗರದ ಮಹಿಳೆಯರು. ಗಣೇಶನನ್ನು ಕೂಡಿಸಿ ಪ್ರತಿದಿನ ಪೂಜೆ ಪುನಸ್ಕಾರ,ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಟಿಸುವುದರೊಂದಿಗೆ ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ಮಾಡಿ ಗಣೇಶನ ನೋಡಲು ಬಂದ ಭಕ್ತಾದಿಗಳಿಗೆ ಉಣ ಬಡಿಸಿದರು. ನಮ್ಮ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿ ನಮ್ಮ ಜಿಲ್ಲೆಯ ಇಂಡಿ ಪಟ್ಟಣಕ್ಕೆ ಬಂದಿರುವ ನಮ್ಮ ಹೆಮ್ಮೆಯ ಮಹಿಳಾ ಉಪ ವಿಭಾಗ ಅಧಿಕಾರಿಗಳಾದ ಶ್ರೀಮತಿ ಅನುಪಮಾ ವಸ್ತ್ರದ ಮೇಡಂ ಅವರನ್ನು ಆತ್ಮೀಯವಾಗಿ ಗಣೇಶ್ ವಿಸರ್ಜನೆ ಕಾರ್ಯಕ್ರಮಕ್ಕೆ ಸ್ವಾಗತಿಸಿ ಸನ್ಮಾನಿಸಿ ಅರಿಶಿಣ ಕುಂಕುಮ ವಿತ್ತು ಗೌರವಿಸಲಾಯಿತು. ಇಂಡಿ ಉಪ ವಿಭಾಗಾಧಿಕಾರಿಗಳಾದ ಅನುಪಮಾ ವಸ್ತ್ರದ ಮೇಡಂ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಹಿಂದೆ ಇಲ್ಲ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಮಹಿಳೆಯರು ಪುರುಷರ ಸರಿ ಸಮಾನರು ಎಂಬುದಕ್ಕೆ ಸಾಕ್ಷಿ,ನಮ್ಮ ಇಂಡಿ ಪಟ್ಟಣದ ಬೀರಪ್ಪ ನಗರದ ಮಹಿಳೆಯರು ನಮ್ಮ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳೆಯರು ಗಣೇಶನನ್ನು ಕೂಡಿಸಿರುವುದು.ಇದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು. ಈ ಗಜಾನನ ಸಂಘದ ಮಹಿಳಾ ಅಧ್ಯಕ್ಷ ಶ್ರೀಮತಿ ರಾಜಶ್ರೀ ಜೈನ್, ಉಪಾಧ್ಯಕ್ಷೆ ಶ್ರೀಮತಿ ಶೈಲಾ ಕಂಬಾರ್, ಸದಸ್ಯರು ಶ್ರೀಮತಿ ಆರತಿ ಜೇವೂರ್, ಶ್ರೀಮತಿ ಕಮಲಾ ಕಟ್ಟಿಮನಿ, ಶ್ರೀಮತಿ ಆರತಿ ಚೌವ್ಹಾಣ್, ಶ್ರೀಮತಿ ಪಾರ್ವತಿ ಕೋಳಿ ಶ್ರೀಮತಿ ಗೀತಾ ಹಿರೇಮಾಳ, ಶ್ರೀಮತಿ ದ್ರಾಕ್ಷಾಯಿಣಿ ಮಸಳಿ, ಶ್ರೀಮತಿ ಜ್ಯೋತಿ ಸೆಂಡಿಗಿ, ಶ್ರೀಮತಿ ಸುರೇಖಾ ಪೋದ್ದಾರ್, ಹಾಗೂ ಇಂಡಿ ಪಟ್ಟಣದ ಬೀರಪ್ಪ ನಗರದ ಎಲ್ಲಾ ಸಮಾಜದ ಮಹಿಳೆಯರು ಸೇರಿ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿಯೇ ಗಣೇಶನನ್ನು ಕೂಡಿಸಿ ಮಹಿಳೆ ಅಬಲೆಯಲ್ಲ ಸಬಲೆ ಎಂದು ನಿರೂಪಿಸಿದ್ದಾರೆ. ಶ್ರೀಮತಿ ಶಾಂತಲಾ ಮಹೇಂದ್ರಕರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.
ವರದಿ:ಬಸವರಾಜ್ ಪಡಶೆಟ್ಟಿ