ಸಂಗಮನಾಥ ಸಜ್ಜನ ಅವರಿಗೆ – ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.
ಬೆಂಗಳೂರು ಸ.01





ಜನಸಿರಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಕೊಡ ಮಾಡುವ 2025 ನೇ. ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರಿನ ಕ್ರೈಸ್ಟ್ ಶಾಲೆಯ (ಐಸಿಎಸ್‌ಸಿ) ಪ್ರಾಥಮಿಕ ಕನ್ನಡ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಮತ್ತು ಯುವ ಕವಿಯಾದ ಸಂಗಮನಾಥ.ಪಿ ಸಜ್ಜನ ರವರ 15 ವರ್ಷಗಳ ಶಿಕ್ಷಣ ಸಂಘಟನೆ ಮತ್ತು ಸಾಹಿತ್ಯ ಸೇವೆಯನ್ನು ಗಮನಿಸಿ ಪ್ರಶಸ್ತಿಯನ್ನು ಬೆಂಗಳೂರಿನ ಶಿಕ್ಷಕರ ಸದನದ ಸಭಾಂಗಣದಲ್ಲಿ ಪ್ರಧಾನ ಮಾಡಲಾಯಿತು. 2025 ಜನಸಿರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ, ಸಿ.ಸೋಮಶೇಖರ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಶ್ರೀಯುತ ಹಿರೇಮಗಳೂರು ಕಣ್ಣನ್, ಹಾಸ್ಯ ನಟ ವೈಜನಾಥ್ ಬಿರಾದಾರ್, ಮಿಮಿಕ್ರಿ ಗೋಪಿ, ಜನಪದ ಗಾಯಕ ನಾಗರಾಜ್ ಹೊಸಕೋಟೆ ಮತ್ತು ಜನಸಿರಿ ಫೌಂಡೇಶನ್ ನ ಮುಖ್ಯಸ್ಥರಾದ ನಾಗಲೇಖ ಮುಂತಾದ ಗಣ್ಯರ ಸಮ್ಮುಖದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ವೀರೇಶ್.ಕೆ.ಹೊಸಹಳ್ಳಿ