ಸಭ್ಯತೆ ಉತ್ತಮ ವ್ಯಕ್ತಿತ್ವದ ಲಕ್ಷಣ – ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಸ.02

ಸಭ್ಯತೆ ಎನ್ನುವುದು ಉತ್ತಮ ವ್ಯಕ್ತಿತ್ವದ ಲಕ್ಷಣ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಸಭ್ಯ ವರ್ತನೆಗಳ ಬೆಳವಣಿಗೆಗೆ ಅಗತ್ಯವಾದ ಮೌಲ್ಯಗಳು” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಮಕ್ಕಳು ತಮ್ಮ ನಿತ್ಯ ಜೀವನದಲ್ಲಿ ಪ್ರಸನ್ನತೆ, ಉತ್ತಮ ಸಾಮಾಜಿಕ ಸಂಬಂಧಗಳು, ಶಾಂತಿ ಮತ್ತು ಅಹಿಂಸೆಯಂತಹ ಮೌಲ್ಯಗಳನ್ನು ರೂಢಿಸಿ ಕೊಂಡು ಸಭ್ಯಯುತ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಶಿಬಿರದ ಪ್ರಯುಕ್ತ ಕುಮಾರಿ ವಿವಿಕ್ತ ಅವರಿಂದ ಗಣೇಶನ ಭಜನೆ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಆಟಗಳನ್ನು ಸಂತೋಷ್ ಕುಮಾರ್ ಆಡಿಸಿದರು.
ತರಗತಿಯಲ್ಲಿ ಸುಧಾಮಣಿ, ಡಾ, ಭೂಮಿಕ, ಹರ್ಷಿತಾ, ಯಶಸ್ವಿ, ಕೋಮಲಸಿರಿ, ವೈಷ್ಣವಿ, ಸಾಯಿಸಮರ್ಥ್, ಶ್ರೇಯಸ್ಸು, ವಿನತಿ, ಅಭಿರಾಮ್, ಪ್ರಣಾಮ್ಯ, ನಮ್ರತಾ, ಜಶ್ವಿತ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.