ನಾಗಪುರ ದೀಕ್ಷಾ ಭೂಮಿಯ ಯಾತ್ರೆಗೆ ಐರಾವತ ಬಸ್ ಗಳ ವ್ಯವಸ್ಥೆಗಾಗಿ ಛಲವಾದಿ ಮಹಾ ಸಭಾ ಆಗ್ರಹ.
ಬಳ್ಳಾರಿ ಸ.02

ಛಲವಾದಿ ಮಹಾಸಭಾ (ರಿ)ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿ ಕೊಳ್ಳುವುದು ಏನೆಂದರೆ ಈ ಹಿಂದೆ 2024/25 ನೇ. ಸಾಲಿನಲ್ಲಿ ನಾಗಪುರ ದಿಕ್ಷಾ ಭೂಮಿಯ ಯಾತ್ರೆಗೆ ತೆರಳಿದಂತಹ ಯಾತ್ರಾರ್ಥಿಗಳಿಗೆ ಹಳೆಯ ಬಸ್ ಗಳಿಂದ ಆವ್ಯವಸ್ಥೆಯಲ್ಲಿ ಕಳಿಸಿದ್ದರಿಂದ ಹೋಗಿರುವಂತ ಯಾತ್ರಾರ್ಥಿಗಳಿಗೆ ಬಹಳ ತೊಂದರೆಯ ನೋವನ್ನು ಅನುಭಸಿದ್ದರಿಂದ ಈ ವರ್ಷವೂ ಕೂಡ ನಡೆಯಲಿರುವ ನಾಗಪುರ ದಿಕ್ಷಾ ಭೂಮಿಯಲ್ಲಿ ಪ್ರವರ್ತನಾ (ವಿಜಯ ದಶಮಿ ದಿನದಂದು) ನಾಗಪುರ ದೀಕ್ಷಾ ಭೂಮಿ ಈ ಯಾತ್ರೆಗೆ ಕಳುಹಿಸುವ ಸಂಬಂದ ಡಾ, ಬಿ.ಆರ್ ಅಂಬೇಡ್ಕರ್ ಅವರ ಅನುಯಾಯಿಗಳು ಜಿಲ್ಲೆಯಿಂದ ಹೆಚ್ಚಿನ ಜನ ಸಂಖ್ಯೆಯಲ್ಲಿ ತೆರಳುತ್ತಿದ್ದರಿಂದ ಈ ಒಂದು ಮಹತ್ವದ ನಾಗಪುರದ ದೀಕ್ಷಾ ಭೂಮಿಯ ಕಾರ್ಯಕ್ರಮಕ್ಕೆ ಈಗ ಬಳ್ಳಾರಿ ಜಿಲ್ಲೆಯಿಂದ ಹೋಗುತ್ತಿರವಂತಹ ಮಹಾರಾಷ್ಟ್ರದ ನಾಗಪುರದಲ್ಲಿ ದೀಕ್ಷಾ ಭೂಮಿ ಯಾತ್ರೆಗೆ ದಿನಾಂಕ 30-09-2025 ರಿಂದ 04-10-2025 ನೇ. ಸಾಲಿನಲ್ಲಿ ನಡೆಯಲಿರುವಂತ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಂತಹ ಬಳ್ಳಾರಿ ಜಿಲ್ಲೆಯ ಹಾಗೂ ಆಯಾ ತಾಲ್ಲೂಕಿನಗಳಿಂದ ತೆರಳುವಂತೆ ಜನರಿಗೆ ಹಿಂದಿನ ವರ್ಷದಲ್ಲಿ ಹಳೆಯ ಅವ್ಯವಸ್ಥೆಯ ಬಸ್ಸುಗಳನ್ನು ನೀಡಿದ್ದರಿಂದ ಯಾತ್ರಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದ್ದು ಆ ತೊಂದರೆ ಈಗ ಆಗಲಾರದಂತೆ ಅನುಕೂಲವಾಗಿರುವಂತ ಕೆ.ಎಸ್.ಆರ್.ಟಿ.ಸಿಯ ಐರಾವತವಾದ ಸುರಕ್ಷಿತವಾದ ಬಸ್ ಗಳ ವ್ಯವಸ್ಥೆಯನ್ನು ಮಾಡಿಕೊಟ್ಟು ದಿಕ್ಷಾ ಭೂಮಿಯ ಯಾತ್ರೆಗೆ ಇಲ್ಲಿಂದ ಪ್ರಯಾಣಿಸುವಂತ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಛಲವಾದಿ ಮಹಾ ಸಭಾ (ರಿ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸಿ.ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾ ಸಭಾ, ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಾಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಮಾನಯ್ಯ.ಬಿ ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ, ಕೆ.ಶಂಕರ್ ನಂದಿಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಛಲವಾದಿ ಲೋಕೇಶ್ ಕಪಗಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾ ಸಭಾ,ಮಲ್ಲಿಕಾರ್ಜುನ.ಬಿ ಗೋನಾಳ ಛಲವಾದಿ ಮುಖಂಡರು. ಡಿ.ರಾಮಕೃಷ್ಣ ಛಲವಾದಿ ಯುವ ಮುಖಂಡರು ಎಲ್ಲರೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.