ರಾಜ್ಯದಲ್ಲಿ ಕುಗ್ಗುತಿದೆ ಅರಣ್ಯ ಪ್ರದೇಶ – ಅರಣ್ಯ ಸಚಿವ ಈಶ್ವರ್ ಖಂಡ್ರೆ.

ಮುದ್ದೇಬಿಹಾಳ ಸ.02

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಲುಮರದ ತಿಮ್ಮಕ್ಕ ವೃಕ್ಸೋ ಧ್ಯಾನ, ರೆಡ್ಡಿ ಸಹಕಾರ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸಚಿವರಾದ ಎಚ್.ಕೆ ಪಾಟೀಲ್, ಈಶ್ವರ್ ಕಂಡ್ರೆ ಎಂ.ಬಿ ಪಾಟೀಲ್, ಚಾಲನೆ ನೀಡಿದರು. ಮುದ್ದೇಬಿಹಾಳ ಪ್ರಕೃತಿ ವಿಕೋಪದಿಂದ ಮೇಘ ಸ್ಫೋಟ ಆಗುತ್ತಿದೆ, ಮಳೆ ಬೇಕಾದಾಗ ಬಾರದೆ ಬೇಡವಾದಾಗ ಸುರಿಯುತ್ತಿದೆ. ರಾಜ್ಯದಲ್ಲಿ ಅರಣ್ಯ ಕ್ಷೇತ್ರ ಕಡಿಮೆ ಆಗುತ್ತಿದೆ. ಅರಣ್ಯ ಸಂರಕ್ಷಣೆಯತ್ತ ನಾವ್ಯಾರು ಚಿಂತಿಸುತ್ತಿಲ್ಲಾ. ಎಂದು ಅರಣ್ಯ ಸಚಿವ ಈಶ್ವರ್ ಕಂಡ್ರೆ ಹೇಳಿದರು. ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಸಾಲುಮರದ ತಿಮ್ಮಕ್ಕ ರಕ್ಷೋದ್ಯಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ರೆಡ್ಡಿ ಸಹಕಾರ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಂಗವಾಗಿ ಮುದ್ದೇಬಿಹಾಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಭಾಗದಲ್ಲಿ ಶೇ 5 ಕ್ಕಿಂತ ಕಡಿಮೆ ಅರಣ್ಯ ಇದೆ, ವಿಜಯಪುರ ಜಿಲ್ಲೆಯಲ್ಲಿ ಶೇ 0. 5 ಪ್ರಮಾಣ ಇದೆ.ಆದರೆ ಸಚಿವ ಎಂ ಬಿ ಪಾಟೀಲರು ಗಿಡಗಳನ್ನು ಬೆಳೆಸಿದ್ದಾರೆ. ಕ್ಷೇತ್ರ ಶಾಸಕ ನಾಡಗೌಡರು 37 ಎಕರೆ ಜಮೀನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಕೊಟ್ಟಿದ್ದಾರೆ. ಶಾಸಕರ ಶ್ರಮದಿಂದ ರೂ 2 ಕೋಟಿ ವೆಚ್ಚದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿ ಮಾಡಲಾಗುವುದು ಎಂದರು. ಮುದ್ದೇಬಿಹಾಳದ ಬಿದರಕುಂದಿ ಬೆಟ್ಟದಲ್ಲಿ 3.760 ಸಸ್ಯ ಪ್ರಭೇದಗಳನ್ನು ನೀಡಲಾಗಿದೆ. 6 ತಿಂಗಳಲ್ಲಿ ಇದನ್ನು ಪೂರ್ಣ ಗೊಳಿಸಲಾಗುವುದು ಎಂದು ತಿಳಿಸಿದರು. ರೆಡ್ಡಿ ಸಹಕಾರ ಬ್ಯಾಂಕಿಗೆ 111 ವರ್ಷವಾಗಿದ್ದು. ರಾಜ್ಯದ ಹಲವಡೆ ಬ್ಯಾಂಕಿನ ಶಾಖೆಗಳಲ್ಲಿ ಅತಿ ಕಡಿಮೆ ಬಂಡವಾಳ ಹೊಂದಿರುವ ಶಾಖೆ ಮುದ್ದೇಬಿಹಾಳ ಆಗಿದೆ. ಬ್ಯಾಂಕಿನ ಅಂಕಿ ಸಂಖ್ಯೆ 2 ವರ್ಷಗಳಲ್ಲಿ ಹೆಚ್ಚಳವಾಗಬೇಕು. ಈ ಜವಾಬ್ದಾರಿ ನಾಡಗೌಡರ ಮೇಲಿದೆ ‘ ಎಂದು ಸಚಿವ ಎಸ್.ಕೆ ಪಾಟೀಲ್ ಹೇಳಿದರು. ಶಾಸಕ ಸಿ.ಎಸ್ ನಾಡಗೌಡ ಮಾತನಾಡಿದರು, ಸಚಿವ ಎಂ.ಬಿ ಪಾಟೀಲ್. ಎರೆಹೊಸಳ್ಳಿ ವೇಮನಾನಂದ ಸ್ವಾಮೀಜಿ. ಇಲಕಲ್ ಗುರು ಮಹಾಂತ ಸ್ವಾಮೀಜಿ. ಸಂಸದ ರಮೇಶ್ ಜಿಗಜಿಣಗಿ. ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷೆ ಸಂಗಮೇಶ್ ಬಬಲೇಶ್ವರ್. ಗ್ರಾಮ ಪಂಚಾಯತಿ ಅಧ್ಯಕ್ಷ ರೂಪಾ ಚಲವಾದಿ. ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಿವ ಶಂಕರಗೌಡ ಹಿರೇಗೌಡರ್. ಕಾಂಗ್ರೆಸ್ ಮುಖಂಡ ಸಿ.ಬಿ ಅಸ್ಕಿ. ಅರಣ್ಯ ಇಲಾಖೆಯ ಮಂಜುನಾಥ್ ಚೌಹಾನ್. ಮಲ್ಲಿನಾಥ್ ಕುಸನಾಳ. ಕೆ.ಆರ್.ಐ.ಡಿ.ಎಲ್ ಇ.ಇ ಆನಂದ್. ಬಸನಗೌಡ ಬಿರಾದರ್ ಗಿರೀಶ್ ಹಲಕುಡೆ ಇದ್ದರು. ಗದ್ದಲ ಮದರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನರು ಒಮ್ಮೆಲೆ ಸನ್ಮಾನಕ್ಕೆ ಮುಂದ ಆದ್ದರಿಂದ ಕೆಲ ಕಾಲ ಗದ್ದಲದ ವಾತಾವರಣದ ಉಂಟಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿರಲಿಲ್ಲ. ಜಿ.ಪಂ ತಾ.ಪಂ ಚುನಾವಣೆ ಶೀಘ್ರ ಸಚಿವ ಎಸ್.ಕೆ ಪಾಟೀಲ್. ಮುದ್ದೇಬಿಹಾಳ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ತ್ವರಿತವಾಗಿ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಎಂದು ಕಾನೂನು ಸಚಿವ ಎಸ್.ಕೆ ಪಾಟೀಲ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಹಲವಾರು ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಬಗೆಹರಿಸಿ ಕೊಂಡು ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಆಗದೆ ಸಂಕಷ್ಟದಲ್ಲಿದ್ದು ಬಿಲ್ ಪಾವತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಂಬ ಬಗ್ಗೆ ಉತ್ತರಿಸಿದ ಸಚಿವರು, ಎಲ್ಲರಿಗೂ ಒಮ್ಮೆಗೆ ಬಿಲ್ ಪಾವತಿ ಮಾಡಲು ಆಗುವುದಿಲ್ಲ, ವಿಳಂಬ ಆಗುತ್ತಿರುವುದು ನಿಜ, ಆದರೆ ಸೂಕ್ತ ಸಮಯದಲ್ಲಿ ಬಿಲ್ ಪಾತಿಸಲಾಗುವುದು, ಸಂಬಂಧಪಟ್ಟ ಸಚಿವರನ್ನು ಕೇಳಿ ಎಂದು ಹೇಳಿದರು. ಮುದ್ದೇಬಿಹಾಳ ಮತ ಕ್ಷೇತ್ರದ ಮೂರ್ನಾಲ್ಕು ಐತಿಹಾಸಿಕ ಕ್ಷೇತ್ರಗಳ ಕುರಿತು ಶಾಸಕ ನಾಡಗೌಡ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಬಿದರಕುಂದಿ ಸಾಲುಮರದ ವೃಕ್ಸೋದ್ಯಾನಕ್ಕೆ ತೆರಳಲು ಜೀಪ್ ಲೈನ್ ನಿರ್ಮಾಣ ಮಾಡಬೇಕು. ಎಂಬ ಪರಿಸರ ಪ್ರೀಯರ ಬೇಡಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ್ ಕಂಡ್ರೆ ಪ್ರತಿಕ್ರಿಯಿಸಿದರು. ಶಾಸಕ ಸಿ.ಎಸ್ ನಾಡಗೌಡ. ಮುಖಂಡ ಸಿ.ಬಿ ಅಕ್ಕಿ. ಪುರಸಭೆ ಅಧ್ಯಕ್ಷ ಮಹಿಬೂಬ್ ಗೊಳಸಂಗಿ. ಪ್ರಭುರಾಜ್ ಕಲಬುರ್ಗಿ. ಸತೀಶ್ ಓಸ್ವಾಲ್. ಇನ್ನೂ ಅನೇಕ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button