ಶ್ರದ್ಧೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ – ಶ್ರೀಮತಿ ಎಂ.ಗೀತಾ ನಾಗರಾಜ್ ಅಭಿಮತ.
ಚಳ್ಳಕೆರೆ ಸ.03





ಶ್ರೀರಾಮಕೃಷ್ಣ ಪರಮಹಂಸರು ತಿಳಿಸಿದಂತೆ ಶ್ರದ್ಧೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ ಅಭಿಪ್ರಾಯ ಪಟ್ಟರು.
ತ್ಯಾಗರಾಜ ನಗರದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರದ್ಧೆಯ ಮಹಿಮೆ”ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಹನುಮಂತನಿಗೆ ರಾಮನಾಮದ ಮೇಲಿದ್ದ ಶ್ರದ್ಧೆಯಿಂದ ಸಮುದ್ರವನ್ನು ದಾಟಲು ಸಾಧ್ಯವಾಯಿತು. ಯಾವುದೇ ಕೆಲಸವಾದರೂ ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.

ಭಗವದ್ ಶ್ರದ್ಧೆಯಿಂದ ಅವನ ದರ್ಶನ ಲಭಿಸುತ್ತದೆ.ಆದ್ದರಿಂದ ಶ್ರದ್ಧೆಯ ಮಹಿಮೆ ಅನಂತವಾಗಿದ್ದು ಸಕಲ ಯಶಸ್ವಿನ ಮೂಲ ವಸ್ತುವೇ ಶ್ರದ್ಧೆಯಾಗಿದ್ದು ನಿತ್ಯ ಜೀವನದಲ್ಲಿ ಅದನ್ನು ರೂಢಿಸಿ ಕೊಂಡು ಸಾರ್ಥಕ ಜೀವನ ನಡೆಸಬಹುದು ಎಂದು ಹೇಳಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀರಾಮರಕ್ಷಾ ಸ್ತೋತ್ರ” ಪಠಣ, ವಿಶೇಷ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.

ಈ ವಿಶೇಷ ಸತ್ಸಂಗದಲ್ಲಿ ಶ್ರೀಮತಿ ರಂಗಮ್ಮ ಗುಂಡಲ, ಹೆಚ್ ಲಕ್ಷ್ಮೀದೇವಮ್ಮ, ಮಂಗಳಾ ಶಿವಕುಮಾರ್, ಸರ್ವಮಂಗಳ ಶಿವಣ್ಣ, ಅನುಸೂಯ ರಾಘವೇಂದ್ರ, ಎಂ.ಲಕ್ಷ್ಮೀದೇವಮ್ಮ, ಸರಸ್ವತಿ, ಪಂಕಜ ಚೆನ್ನಪ್ಪ, ಸರಸ್ವತಿ, ಸೌಮ್ಯ ಪ್ರಸಾದ್ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.