ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ನಾಯಿ ಮರಿಯ ರಕ್ಷಿಸಿದ – ಅಗ್ನಿ ಶಾಮಕ ದಳದ ಸಿಬ್ಬಂದಿ ವರ್ಗದವರು.
ತಾಂಡ್ರಮರದ ಹಳ್ಳಿ ಸ.03

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ತಾಂಡ್ರಮರದ ಹಳ್ಳಿ ಗ್ರಾಮದಲ್ಲಿ ಜಯಚಂದ್ರ ಯೆಂಬುವವರ ಹೊಲದಲ್ಲಿಯ ಬಾವಿಯೊಂದರಲ್ಲಿ ನಾಯಿ ಮರಿಯು ಕಲ್ಲು ಕಟ್ಟಡದ ಅಂದಾಜು 30×30 ಅಡಿ ವಿಸ್ತಾರವಾದ 65 ರಿಂದ 70 ಅಡಿ ಆಳದ ತೆರೆದ ನೀರಿಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ನಿನ್ನೆ ಸಾಯಂಕಾಲ ಕಾಲು ಜಾರಿ ನಾಯಿ ಮರಿ ಬಿದ್ದಿದ್ದು.

ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆ ನಿಯಂತ್ರಣ ಕೊಠಡಿಗೆ ದೂರವಾಣಿಗೆ ಕರೆ ಮಾಡಿ ವೇಣುಗೋಪಾಲರಾಜ ರವರು ತಿಳಿಸಿದರು.

ಕರೆ ಬಂದ ತಕ್ಷಣ ವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 65 ರಿಂದ 70 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 00:40 ನಲವತ್ತು ನಿಮಿಷಗಳ ಕಾಲ ಶ್ರಮ ವಹಿಸಿ ಸಿಬ್ಬಂದಿಯವರುಗಳು ಬಕೆಟ್ ಹಾಗು ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ನಾಯಿ ಮರಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ತಾಂಡ್ರಮರದ ಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ನಾಯಿ ಮರಿಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಪ್ರಮುಖ ಅಗ್ನಿಶಾಮಕ ರವರಾದ ಶ್ರೀನಿವಾಸ ರವರ ನೇತ್ರತ್ವದಲ್ಲಿ, ರವೀಂದ್ರ ಸಂಗಮ, ನಾಗಪ್ಪ ಶಿವಾಪುರ, ಹುಲ್ಲಪ್ಪಗೌಡ ಗದ್ದಿಗೌಡರ, ಮಂಜುನಾಥ್ ಭಿಂಗ್ರೆ ಹಾಗೂ ರಾಜು ಮುರಕುಟ್ಟಿ, ಭಾಗವಹಿಸಿದ್ದರು.

