ಸಂಗಮೇಶ್ವರ ಸಹಕಾರಿ ಸಂಘಕ್ಕೆ – 98.77 ಲಕ್ಷ ರೂ. ಲಾಭ.
ಮುದ್ದೇಬಿಹಾಳ ಸ.04





ನಿರ್ದೇಶಕರ ಪೂರ್ವಭಾವಿ ಸಭೆಯಲ್ಲಿ ಪ್ರತಿಭಾ ಪುರಸ್ಕಾರಕ್ಕೆ ತೀರ್ಮಾನ, ಪ್ರಗತಿಯತ್ತ ಸಾಗುತ್ತಿರುವ ಇಲ್ಲಿನ ರಾಘವೇಂದ್ರ ಸ್ವಾಮಿಗಳ ಬೃಂದಾವನ ಹತ್ತಿರ ಇರುವ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತವು 2024-2025 ನೇ. ಆರ್ಥಿಕ ವರ್ಷದಲ್ಲಿ 98.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್.ಬಿ ಪಾಟೀಲ್ ವಕೀಲರು.ಅಧ್ಯಕ್ಷರಾದ ಸಾವಿತ್ರಿ ತೊಂಡಿಹಾಳ ತಿಳಿಸಿದರು. ಸಂಘದ ಸಭಾ ಭವನದಲ್ಲಿ ಬುಧವಾರ ನಡೆದ ನಿರ್ದೇಶಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು. ಸಂಘದ ಶೇರು ಬಂಡವಾಳ ರೂ.1.93.ಕೋಟಿ. ಒಟ್ಟು ನಿವ್ವಳ 5.32.ಕೋಟಿ. ಒಟ್ಟು ಠೇವುಗಳು 36.34 ಕೋಟಿ ಒಟ್ಟು ಬಂಡವಾಳ 48.27 ಕೋಟಿ ಇರುವುದು ಆರ್ಥಿಕ ಸುಭದ್ರತೆಯನ್ನು ಖಚಿತ ಪಡಿಸುತ್ತದೆ ಎಂದರು. ಇತರೆ ಕೊಡುತ್ತಕ್ಕವುಗಳು 2.13.ಕೋಟಿ. ಗುಂತಾವನಿಗಳು 16.04.ಕೋಟಿ ಸಾಲ ಮತ್ತು ಮುಂಗಡಗಳು 25.04 ಕೋಟಿ ಇವೆ. 46.35 ಲಕ್ಷ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳು ಇವೆ. 1476 ಸಾಮಾನ್ಯ 569 ಸಹ ಸದಸ್ಯರು ಸೇರಿ ಒಟ್ಟು 2045 ಸದಸ್ಯರನ್ನು ಸಂಘವು ಹೊಂದಿದೆ. ಹಿರೇಮರಾಳದಲ್ಲೂ ಸಂಘದ ಶಾಖೆ ಆರಂಭಿಸಿ ಆ ಭಾಗದ ಜನತೆಗೂ ಸೇವೆ ಸಲ್ಲಿಸುತ್ತಿದೆ ಎಂದರು.27 ವರ್ಷ ಪೂರೈಸಿ 28 ವರ್ಷಕ್ಕೆ ಕಾಲಿಡುತ್ತಿರುವ ಸಂಘವು ಕಾಲಕಾಲಕ್ಕೆ ಹೊಸ ನಿಯಮಗಳನ್ನು ಅಳವಡಿಸಿ ಕೊಂಡು ಗ್ರಾಹಕ ಸ್ನೇಹಿಯಾಗಿ ಪ್ರಗತಿಯತ್ತ ಧಾಪುಗಾಲುಡುತ್ತದೆ. ರಾಜ್ಯ ಮಟ್ಟದ ಅತ್ಯುತ್ತಮ ಪತ್ತಿನ ಸಹಕಾರಿ ಸಂಘ ವಿಜಯಪುರ ಡಿಸಿಸಿ ಬ್ಯಾಂಕಿನಿಂದ ಅತ್ಯುತ್ತಮ ಕಾರ್ಯನಿರ್ವಹಣೆಯ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಗೆ ಭಾಜನವಾಗಿ ಸತತ 8 ವರ್ಷಗಳಿಂದ ಜಿಲ್ಲೆಯ ಪ್ರಥಮ ಶ್ರೇಣಿಯ ಅತ್ಯುತ್ತಮ ಪತ್ತಿನ ಸಹಕಾರಿ ಸಂಘ ಶ್ರೇಯಸ್ಸಿಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂದು ಉಪಾಧ್ಯಕ್ಷ ಬಸವರಾಜ ಡಮನಾಳ, ವೃತ್ತಿಪರ ನಿರ್ದೇಶಕರು ನಿವೃತ್ತ ಪ್ರಾಂಶುಪಾಲರು ಆಗಿರುವ ಎಸ್.ಎಸ್ ಹೊಸಮನಿ ತಿಳಿಸಿದರು. ನಿರ್ದೇಶಕರಾದ ವಿ.ವೈ ಮಂಕಣಿ, ಎಸ್.ಎಸ್ ಶಿವನಗಿ, ಬಿ.ಎಸ್ ಬಿರಾದಾರ್, ಆರ್.ಎಸ್ ಬಿರಾದಾರ್, ಎಂ .ಎಸ್ ಪಾಟೀಲ್, ಬಿ.ಕೆ ಬಿರಾದಾರ್, ಬಿ.ಟಿ ಬಿರಾದಾರ್, ಟಿ.ಎಮ್ ಬೇಲಾಳ, ಎಂ..ಬಿ ಪಾಟೀಲ್ ವಕೀಲರು, ಜಿ.ಎಚ್ ಬೋಯೇರ್, ಸುಜಾತ ಕಾಳಗಿ, ಮಾದೇವಿ ಬಿರಾದಾರ್, ಎಚ್.ಟಿ ಬಿರಾದರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ ಪಾಟೀಲ್, ಹಿರೇ ಮುರಾಳ ಶಾಖೆ ವ್ಯವಸ್ಥಾಪಕ ಶ್ರೀಶೈಲ್ ರಾಯಗೊಂಡ, ಹಿರಿಯ ಸಹಾಯಕ ವಿ.ಬಿ ಪಾಟೀಲ್, (ಪುಟ್ಟು) ಕಿರಿಯ ಸಹಾಯಕ ಎ.ಜಿ ಬಿರಾದಾರ್, ಸಿಬ್ಬಂದಿ ಇದ್ದರು. ಸಪ್ಟಂಬರ್ 6ರಂದು ಬೆಳಗ್ಗೆ 11 ಗಂಟೆಗೆ ಸಂಘದ ಸಭಾ ಭವನದಲ್ಲಿ 28 ನೇ. ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸಾವಿತ್ರಿ ಶೇಖರ್ ತೊಂಡಿಹಾಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ . ಸಭೆಯಲ್ಲಿ ಎಸ್.ಎಸ್.ಎಲ್.ಸಿ ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಸಂಘದ ಸದಸ್ಯರಾದವರು ಶಿಕ್ಷಕ ಸೇರಿದಂತೆ ವಿವಿಧ ನೌಕರಿಗಳಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ ಅಂಥವರನ್ನು ಗೌರವಿಸಲಾಗುತ್ತದೆ. ಪ್ರತಿಭಾ ಪುರಸ್ಕಾರ ಮತ್ತು ಗೌರವ ಸನ್ಮಾನಕ್ಕೆ ಸೆಪ್ಟಂಬರ್ 5 ಮಧ್ಯಾಹ್ನ 3 ಗಂಟೆ ಒಳಗಾಗಿ ಸಂಘದ ಹಿರೇಮುರಾಳ ಶಾಖೆಯ ಶಾಖಾ ವ್ಯವಸ್ಥಾಪಕ ಶ್ರೀಶೈಲ್ ರಾಯಗೊಂಡ, (9880531702) ಇವರಲ್ಲಿ ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸ ಬೇಕು ಎಂದು ಸಂಘದ ಮುಖ್ಯ ಕಾರ್ಯ ನಿರ್ವಾಧಿಕಾರಿ ಬಿ.ಎಂ ಪಾಟೀಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ