ಶ್ರೀಶಾರದಾಶ್ರಮದಿಂದ ಮನೆಗೆ ಮನೆಗೆ ದಿವ್ಯತ್ರಯರು – ಪ್ರಚಾರಾಂದೋಲನ ಸತ್ಸಂಗ ಕಾರ್ಯಕ್ರಮ.
ಚಳ್ಳಕೆರೆ ಸ.04

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಸಹಯೋಗದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಉಷಾ ಶ್ರೀನಿವಾಸಲು ಅವರ ಗಾಂಧಿ ನಗರದ ವಿಶ್ವಾತ್ಮ ಕೃಪಾ ನಿವಾಸದಲ್ಲಿ ಇಂದು ಸಂಜೆ 5 ಗಂಟೆ ಯಿಂದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರ ನಾಮ ಪಾರಾಯಣ, ವಿಶೇಷ ಭಜನೆ ಮತ್ತು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ವಿಶೇಷ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

