“ಭಾರತ ಹೆಮ್ಮೆಯ ಸುಪುತ್ರರು ಶಿಕ್ಷಕರ ದಿನಾಚರಣೆಯ ಶುಭಾಶಯಗಳು”…..

ಶಿಕ್ಷಕರ ದಿನ ಶಿಷ್ಯ ಸುದಿನ ಸಾಧಕನ ಹಿಂದೆ
ಗುರುವಿನ ಬೆಳಕು
ಲೋಕಜ್ಞಾನ ನೀಡಿದ ಶ್ರೀಗುರುವಿಗೆ
ವಿನಮ್ರತೆಗಳು
ಅಜ್ಞಾನವ ತೋಲಗಿಸಿ ಸುಜ್ಞಾನವ ಅರಿವಿಗೆ
ತಂದ ಶ್ರೀಗುರುವಿಗೆ ನಮನಗಳು
ಲೌಕಿಕ ಕಲೆ ಕಲಿಸಿದ ಗುರುವೃಂದಕೆ ಕೋಟಿ
ಕೋಟಿ ನಮಸ್ಕಾರಗಳು
ಹೃದಯಂತರಾಳದಿ ಹರಸಿ ಬಾನೆತ್ತರಕೆ
ಬೆಳಸಿದ ಶ್ರೀಗುರುವಿಗೆ ಗೌರವ ವಂದನೆಗಳು
ಗುರು ಗುರಿ ಸಿದ್ದಿ ಬುದ್ಧಿ ಜಗದ ಸಿರಿಯು
ಜೀವನ ಪಯಣವು ಯಶಸ್ಸು
ಶಿಷ್ಯನ ಶ್ರಯೋಭಿವೃದ್ಧಿಯೇ ಗುರುವಿನ ನಿತ್ಯ
ಕಾಯಕವು
ಗುರುವಿನ ಗುರಿ ತಲಪುವ ಶಿಷ್ಯೋತ್ತಮನು
ಜಗದಲಿ ಶ್ರೇಷ್ಠತಮನು
ಕಲಿಸಿದ ಹಾರೈಸಿದ ಶಿಕ್ಷಕರಿಗೆ ಇರಲಿ
ಕೃತಜ್ಞತೆಯ ಗೌರವದ ಅಭಿನಂದನೆಗಳು
ಗುರುವಿನ ನುಡಿ ಶುಭ ಅರಿವಿನ ಪಥದಡೆಗೆ
ಗುರುವೇ ಜಗದ ಜ್ಞಾನದ ಒಡೆಯ ಡಾ.
ಸರ್ವಪಲ್ಲಿ ರಾಧಾಕೃಷ್ಣ
ಜನಸಿದ ದಿನ ಅಮೃತ ಘಳಿಗೆ ಶಿಕ್ಷಕರ ಮೆರಗು
ಶಿಷ್ಯರೆಲ್ಲರೂ ಪಾವನರು
ಭಾರತದ ಹೆಮ್ಮೆಯ ಸುಪುತ್ತರು ಶಿಕ್ಷಕರ
ದಿನಾಚರಣೆಯ ಶುಭಾಶಯಗಳು
ಸಮಸ್ತ ಗುರುವೃಂದದವರಿಗೆ ಗೌರವದ ಪುಷ್ಪ
ವೃಷ್ಠಿ ಸದಾ ಹರುಷ ತರಲಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

