“ಜಗದ ನಿಜವಾದ ಶ್ರೇಷ್ಠರು”…..

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ
ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ
ನಮಃ
ಜಗದ ನಿಜವಾದ ಶ್ರೇಷ್ಠರು ಗುರುಗಳು
ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ
ಶುಭಾಶಯಗಳು
ಅಂಧಕಾರವ ಅಳಿಸಿ ವಿದ್ಯೆಯ ಜ್ಯೋತಿ
ಬೆಳಗಿಸಿದವರು
ಸರಿ ದಾರಿಯ ತೋರಿ ಜ್ಞಾನ ದೀವಿಗೆಯ
ಬೆಳಗಿದವರು
ಸಾಧನೆಯ ಹಿಂದೆ ಜವಾಬ್ದಾರಿಯುತ
ರಕ್ಷಕನಾಗಿ ನಿಂತವರು
ಅರಿವಿಲ್ಲದ ಮನಕ್ಕೆ ಅರಿವು ತುಂಬಿದವರು
ಶಿಷ್ಯನಿಗೆ ನಿಜವಾದ ಪಠ್ಯಪುಸ್ತಕ ಅವರ
ಶಿಕ್ಷಕರು
ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ
ವೀರರು
ಸಮಾಜವನ್ನು ನಿರ್ಮಿಸುವ ನಿಜವಾದ
ನಿರ್ಮಾಪಕರು
ವಿದ್ಯಾರ್ಥಿಗಳ ಜೀವನದ ನಿಜವಾದ
ವಾಸ್ತುಶಿಲ್ಪಿಗಳು ಶಿಕ್ಷಕರು
ಉನ್ನತ ಸೇವೆಯ ಹುದ್ದೆಗಳ ಬಗ್ಗೆ ಕನಸಿನ
ಬೀಜ ಬಿತ್ತುವರು
ಅದನ್ನು ಸಾಕಾರ ಮಾಡಿಕೊಳ್ಳಲು
ಸಹಾಯವನ್ನು ಮಾಡುವವರು
ನಮ್ಮ ಜೀವನದಲ್ಲಿ ಶಾಶ್ವತವಾದ ಛಾಪು
ಮೂಡಿಸಿದವರು
ಸದ್ಗುಣ ಸಂಪನ್ಮೂಲ ಶಿಕ್ಷಕರನ್ನು ಪಡೆದಿರುವ
ನಾವೇ ಪುಣ್ಯವಂತರು
ತಿದ್ದಿ ಬುದ್ಧಿ ಹೇಳಿ ಸರಿ ದಾರಿಯನ್ನು
ತೋರಿಸಿದವರು
ಜೀವನದಲ್ಲಿ ಮಹತ್ವದ ಸಾಧನೆಯನ್ನು
ಮಾಡಲು ಪ್ರೇರೆಪಿಸಿದವರು
ಜ್ಞಾನವೆಂಬ ಬೆಳಕಿಗೆ ಕರೆದೊಯ್ದು ಜೀವನದ
ದೀಪ ಬೆಳಗಿಸಿದವರು
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಕಂಡು
ಹಿಡಿದು ಪ್ರೋತ್ಸಾಹಿಸುವರು
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ

