ಕಾನಾಮಡುಗು ದಾಸೋಹ ಮಠದಲ್ಲಿ ಕಾರ್ತಿಕೋತ್ಸವ.
ಕಾನಾಮಡುಗು ನವೆಂಬರ್.18





ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಮಡುಗು ದಾಸೋಹ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕೋತ್ಸವ ಸೇರಿದಂತೆ ಇತರೇ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಸಲಾಗುವುದು ಎಂದು ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯ ತಿಳಿಸಿದರು.ಅವರು ತಾಲೂಕಿನ ಕಾನಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಸ್ವಾಮಿಯ ದಾಸೋಹ ಮಠದಲ್ಲಿ ಮಂಗಳವಾರ ಸಂಜೆ ಕಾರ್ತಿಕ ದೀಪೋತ್ಸವಕ್ಕೆ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರ ನೇತೃತ್ವದಲ್ಲಿ ಚಾಲನೆ ನೀಡಿ ಮಾತನಾಡುತ್ತ , ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕಾರ್ತಿಕ ಪೂಜಾ ಆಚರಣೆಗೆ ಶಿವಾಚಾರ್ಯರಿಂದ ಪೂಜಾ ಕಾರ್ಯದೊಂದಿಗೆ ಸಕಲ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಿದ್ದು, ಡಿಸೆಂಬರ್ 22. ರವರೆಗೆ ನಿತ್ಯ ಕಾರ್ತಿಕ ಪೂಜೆ ನೆರವೇರಲಿದೆ. ಭಕ್ತರು ನಿತ್ಯ ಮಠಕ್ಕೆ ಆಗಮಿಸಿ ದೀಪ ಬೆಳೆಗಿಸುತ್ತಾರಲ್ಲದೆ, ಮಠದಿಂದ ಗದ್ದುಗೆಗಳಿಗೆ ಪೂಜೆ ನೆರವೇರಲಿವೆ. ಡಿ.22-ರಂದು ಕಾರ್ತಿಕ ಮಾಸದ ರಥೋತ್ಸವ ಜರುಗಲಿದೆ ಎಂದು ತಿಳಿಸಿದರು.ಶ್ರೀ ಶರಣ ಬಸವೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಪೂಜಾ ಕೈಕಂರ್ಯ ಗಳೊಂದಿಗೆ ದೀಪದ ಕಂಬವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಮಂಗಳ ವಾದ್ಯಗಳು, ಸಮಾಳ, ನಂದಿ ಧ್ವಜಗಳು ಪೂಜೆಯ ಸಂದರ್ಭದಲ್ಲಿ ಮೊಳಗಿಸಲಾಯಿತು. ಮುಷ್ಟೂರಿನ ಶ್ರೀ ರುದ್ರಮುನಿ ಶಿವಾಚಾರ್ಯರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದಾಸೋಹ ಮಠದ ಉಮಾಪತಿ ಶರಣಾರ್ಯ ಸೇರಿ ಗ್ರಾಮದ ಮುಖಂಡರು, ಭಕ್ತರು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ