ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ – ಸಿ.ಪಿ.ಐ ಪ್ರಹ್ಲಾದ್.ಆರ್ ಚನ್ನಗಿರಿ.
ಕೂಡ್ಲಿಗಿ ಸ.05





ಸರಕಾರಿ ನೌಕರರು ಜನರ ಸೇವಕರು. ಇದನ್ನು ಸದಾ ನೆನಪಿನಲ್ಲಿ ಇಟ್ಟು ಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು. ಇಂತಹ ವ್ಯಕ್ತಿಯನ್ನು ಮತ್ತು ಅವರ ಸೇವೆಯನ್ನು ಈ ಸಮಾಜ ಸದಾ ಸ್ಮರಿಸುತ್ತದೆ ಎಂದು ಕೂಡ್ಲಿಗಿ ಸಿಪಿಐ ಪ್ರಹ್ಲಾದ್.ಆರ್ ಚನ್ನಗಿರಿ ಅವರು ಹೇಳಿದರು.ಇವರು ಗುಡೇಕೋಟೆಯ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ವಯೋ ನಿವೃತ್ತಿ ಹೊಂದಿದ ಎಎಸ್ಐ ಕೆ.ಹೆಚ್ ಯೋಗೇಶ್ ಇವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೊಲೀಸ್ ಇಲಾಖೆ ಜನ ಸ್ನೇಹಿ ಆಗುತ್ತಿದೆ. ಇತ್ತೀಚಿಗೆ ಸರಕಾರ ಮನೆ ಮನೆ ಪೊಲೀಸ್ ಪರಿಕಲ್ಪನೆ ಜಾರಿಗೆ ತಂದಿದೆ. ಇವೆಲ್ಲ ನಾವು ಜನರ ಸೇವೆಗೆ ಮತ್ತಷ್ಟು ತೆರೆದು ಕೊಳ್ಳುವ ಕ್ರಮಗಳು. ಇದರಿಂದಾಗಿ ನಮ್ಮ ಸೇವೆ ಜನರಿಗೆ ಸಕಾಲದಲ್ಲಿ ಸಿಗುವಂತಾಗ ಬೇಕು. ಜೊತೆಗೆ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವದ ಉನ್ನತಿಯತ್ತ ಗಮನ ಹರಿಸಿ ಎಂದರು.

ಪಿ.ಎಸ್.ಐ ಸುಬ್ರಮಣ್ಯಂ ಮಾತನಾಡಿ ಇಂದು ನಮ್ಮ ಕರ್ತವ್ಯದಲ್ಲಿ ಅನೇಕ ಸವಾಲುಗಳಿವೆ. ಅದನ್ನೆಲ್ಲ ಸಮರ್ಥವಾಗಿ ಎದುರಿಸ ಬೇಕು. ಅದಕ್ಕೆ ನಾವು ಸದಾ ಸಿದ್ಧರಿರಬೇಕು ಎಂದರು.ಈ ವೇಳೆ ವಯೋ ನಿವೃತ್ತಿ ಹೊಂದಿದ ಎ.ಎಸ್.ಐ ಕೆ.ಹೆಚ್ ಯೋಗೇಶ್ ಇವರಿಗೆ ಇಲಾಖೆ, ಸಾರ್ವಜನಿಕರಿಂದ ಸನ್ಮಾನಿಸಿ, ಗೌರವಿಸಲಾಗಿತು. ಸಿಬ್ಬಂದಿಗಳಾದ ಮಹಾಂತೇಶ್, ಮುತ್ತಣ್ಣ ಕಾಳಗಿ, ಸ್ವರೂಪ್ ಕೊಟ್ಟೂರು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ಪ್ರಭುರಾಜ್ ಸಂಡೂರು, ವೀರೇಶ್ ಹಚ್ಚೋಳ್ಳಿ, ಬಂಗಾಳಿ ಓಬಯ್ಯ, ಕೃಷ್ಣಪ್ಪ, ರಾಮದುರ್ಗ ಮಲ್ಲಿಕಾರ್ಜುನ, ಐಶ್ವರ್ಯ, ಬಿಂದು ಶ್ರೀ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ