ಅಂಜುಮನ್ ಸಂಸ್ಥೆಯ ಶಾದಿ ಹಾಲನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ – ಸರ್ವ ಧರ್ಮಿಯ ಜನರು ರಕ್ತದಾನ ಶಿಬಿರ ಜರುಗಿತು.
ಇಲಕಲ್ಲ ಸ.05






ನ್ಯಾಯದ ಹರಿಕಾರ, ಪೈಗಂಬರ್ ಮುಹಮ್ಮದ (ಸ) ವಿಷಯದಡಿ ರಾಜ್ಯ ವ್ಯಾಪಿ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ ಇಳಕಲ್ಲ ಘಟಕವು ಅಂಜುಮನೆ ಇಸ್ಲಾಮ ಸಂಸ್ಥೆ ಇಳಕಲ್ಲ ಇವರ ಸಹಯೋಗದೊಂದಿಗೆ ಹುಮ್ಯಾನಿಟೇರಿಯನ ರಿಲೀಫ ಸೊಸೈಟಿ (HRS) ಇಳಕಲ್ಲ ಜಂಟಿಯಾಗಿ ಹಮ್ಮಿಕೊಂಡ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಸುಮಾರು 200 ಜನರು ಜಾತಿ ಮತ ಭೇದವಿಲ್ಲದೇ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಡಾ, M.B ಗೊಂಗಡಶೆಟ್ಟಿಯವರ ಶ್ರೀ ವಿಜಯ ಮಹಾಂತ ರಕ್ತ ಕೇಂದ್ರ ಇಳಕಲ್ಲ ಇದರ ನಿಪುಣ ವೈದ್ಯರ ತಂಡವು ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 5:00 ವರೆಗೆ ರಕ್ತ ಶೇಖರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.


ಈ ಸಂದರ್ಭದಲ್ಲಿ ಡಾ, ಶ್ರೀ M.B ಗೊಂಗಡಶೆಟ್ಟಿ, ಅಂಜುಮನೆ ಇಸ್ಲಾಂ ಸಂಸ್ಥೆ ಅಧ್ಯಕ್ಷ ಉಸ್ಮಾನಗನಿ ಹುಮ್ನಾಬಾದ, ಸಂಸ್ಥೆಯ ಸದಸ್ಯರಾದ ಮುಹ್ಮದ ಆರೀಫ ಫಣಿಬಂದ, ಮೆಹಬೂಬ ದೋಟಿಹಾಳ, HRS ಗ್ರುಪ್ ಲೀಡರ ಅಬ್ದುಲ್ ಗಫಾರ ತಹಶೀಲ್ದಾರ, ಟ್ರೈನರ್ ನಬಿಸಾಬ ಗಬ್ಬೂರ, HRS ವಾಲೈಂಟೀಯರ್ಸಗಳಾದ ಮುಹ್ಮದ ರಫೀಕ ಬಳಗಾನೂರ, ರಾಜಮುಹ್ಮದ ದಫೇದಾರ, ಆದಂಸಾಬ ಕುಳಗೇರಿ, ಮುಹ್ಮದ ಯಾಸೀನ ಗಬ್ಬೂರ, ಮುಹ್ಮದ ಸಿರಾಜುದ್ದೀನ, ಶಫೀ ನಂದವಾಡಗಿ, ರಿಹಾನ ಬದಾಮಿ, ನೂರ ಮುಹ್ಮದ ಬೇಪಾರಿ, ಸೀರತ್ ಸಂಚಾಲಕ ಅಬ್ದುಲ್ ರಹ್ಮಾನ ಬಿಳೇಕುದರಿ ಬಾಬುಲಾಲ ಖಾಜಿ, ಫಾರೂಕ ಉಮರಿ ಮತ್ತಿತರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಅಬ್ದುಲ್.ಗಫಾರ್.ತಹಶೀಲ್ದಾರ್.ಇಲಕಲ್ಲ.ಬಾಗಲಕೋಟ