ಸೆಪ್ಟಂಬರ್ 7 ರಂದು ರಾಜ್ಯ ಮಟ್ಟದ – ರಸ ಪ್ರಶ್ನೆ ಕಾರ್ಯಕ್ರಮ ಆಯೋಜನೆ.
ರೂಢಗಿ ಸ.05

ಮುದ್ದೇಬಿಹಾಳ ತಾಲೂಕಿನ ರೂಢಗಿ ಗ್ರಾಮದಲ್ಲಿ ಶ್ರೀ ನಾರಾಯಣ ಗುರು 171 ನೇ. ಜಯಂತೋತ್ಸವದ ಅಂಗವಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಯುವಕ ಸಂಘದಿಂದ ಸೆಪ್ಟಂಬರ್ 7 ರವಿವಾರ ದಂದು ಬೆಳಿಗ್ಗೆ 8:00 ಗಂಟೆಗೆ ರಾಜ್ಯ ಮಟ್ಟದ ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಂದನೇ. ಬಹುಮಾನ 10001, ಎರಡನೇ. 8001, ಮೂರನೇ. 6001, ನಾಲ್ಕನೇ. 4001, ಐದನೇ. 3001, ಆರನೇ. 2001, ಮತ್ತು ಏಳನೇ. ಬಹುಮಾನವಾಗಿ 1001, ರೂಪಾಯಿ ಹೀಗೆ ಒಟ್ಟು ಎಂಟು ಬಹುಮಾನವನ್ನು ನೀಡಲಾಗುತ್ತದೆ. ರಸ ಪ್ರಶ್ನೆ ಕಾರ್ಯಕ್ರಮವು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಮೂರು ವಿದ್ಯಾರ್ಥಿಗಳ ಒಂದು ತಂಡವಾಗಿರುತ್ತದೆ. ಒಂದು ತಂಡದಲ್ಲಿ ಒಬ್ಬರು ಪ್ರಾಥಮಿಕ. ಪ್ರೌಢ ಮತ್ತು ಪದವೀಧರರು ಇರಬೇಕು. ವಿದ್ಯಾರ್ಥಿಗಳು ಶಾಲೆಯ ಎಸ್.ಎ.ಟಿ.ಎಸ್ ನಂಬರ್ ಮತ್ತು ಮುಖ್ಯ ಗುರುಗಳ ದೃಢೀಕರಣ ತರಬೇಕು. ರಸ ಪ್ರಶ್ನೆಯ ವಿಷಯಗಳು ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವಿಷಯಗಳಿಗೆ ಸಂಬಂಧಿಸಿರುತ್ತದೆ. ಕನ್ನಡ. ಇಂಗ್ಲಿಷ್. ಗಣಿತ್. ವಿಜ್ಞಾನ. ಕ್ರೀಡೆ. ಹಾಗೂ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಕುರಿತು ಸುತ್ತುಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ 9945731073 ಮತ್ತು 7483466506. ಈ ನಂಬರಿಗೆ ಸಂಪರ್ಕಿಸಿರಿ ಎಂದು ಕಮಿಟಿಯು ಪ್ರಕಟಣೆಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

