ಗ್ರಾಮ ದೇವತೆ ಜಾತ್ರಾ ಮಹೋತ್ಸವ – ಹಾಗೂ ಮೆರವಣಿಗೆ.
ಬೇಕಿನಾಳ ಮೇ.23





ತಾಳಿಕೋಟೆ ತಾಲೂಕಿನ ಸುಕ್ಷೇತ್ರ ಬೇಕಿನಾಳ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಹಾಗೂ ಮೆರವಣಿಗೆ ಬೇಕಿನಾಳ ಗ್ರಾಮದಲ್ಲಿ ಹಿಂದಿನಿಂದಲೂ ನಡೆದು ಕೊಂಡು ಬಂದಿರತಕ್ಕಂತಹ ಮೂರು ವರ್ಷಕ್ಕೊಮ್ಮೆ ಬಾದಮಿ ಅಮಾವಾಸ್ಯೆ ಮುಂದೆ ನಡಿಯುತ್ತೆ. ಶ್ರೀದೇವಿಯ ರಥೋತ್ಸವವೂ ಶ್ರೀ ಭದ್ರೇಶ್ವರ ಮಠದ ಹತ್ತಿರ ರಥೋತ್ಸವವನ್ನು ಅಲಂಕಾರ ಮಾಡಿ ಮಹಾ ಮಂಗಳಾರತಿ ವಿಶೇಷ ಪೂಜೆ ಪುಷ್ಪಾಲಂಕಾರ ಮಾಡಿ ದೇವಿಯನ್ನು ಅದರಲ್ಲಿ ಕೂರಿಸಿ ಡೊಳ್ಳು ಕುಣಿತ ಗೊಂಬೆ ಕುಣಿತ ಹಲಗೆ ಜೋಗತಿಯರ ಆಟ ಮತ್ತು ಇನ್ನಿತರ ವಾದ್ಯಗಳೊಂದಿಗೆ ಮೆರವಣಿಗೆ 1.30 ನಿಮಿಷಕ್ಕೆ ಗುಡಿ ಪ್ರವೇಶ ಮಾಡಿ ಮುತ್ತೈದರ ಉಡಿ ತುಂಬಿದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಗಂಟೆಗೆ ವಿಜ್ರಂಬಣೆಯಿಂದ ನೆರವೇರಿತು ಬಿಕಿನಾಳ ಗ್ರಾಮದ ಎಲ್ಲಾ ಗುರು ಹಿರಿಯರು ಯುವಕ ಬಳಗ ಅಕ್ಕ ತಂಗಿಯರು ಎಲ್ಲಾರು ಸೇರಿ ಅದ್ಭುತವಾದ ರಥೋತ್ಸವವನ್ನು ಮಾಡಲಾಯಿತು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶರಣಯ್ಯ. ಈ.ಬೇಕಿನಾಳಮಠ.ತಾಳಿಕೋಟೆ