ಪ್ರವಾದಿ ಮೊಹಮ್ಮದ್ (ಸ.ಅ.) ರ ಜೀವನ ಮಾನವ ಕುಲಕ್ಕೆ ಮಾದರಿ – ಗಫೂರ್ ಸಾಬ್.
ಮಾನ್ವಿ ಸ.06





ಬದುಕುವ ರೀತಿ ನೀತಿಗಳು, ಜೀವನದ ಕ್ರಮ, ಸತ್ಯ-ನಿಷ್ಠೆ, ಪರರ ಉಪಾಕಾರ, ದಾನದ ಶ್ರೇಷ್ಠ ಗುಣ, ಪ್ರತಿ ಹೆಜ್ಜೆ ಹೆಜ್ಜೆಯಲ್ಲಿ ನಡೆದು ತೋರಿಸಿದ ಮಾಹಾನ್ ಚೇತನ ಪ್ರವಾದಿ ವಿಶ್ವಪ್ರವಾದಿ ಹಜರತ್ ಮೊಹಮ್ಮದ್ ಮುಸ್ತಫಾ (ಸ.ಅ.) ರು ಸರ್ವ ಮಾನವ ಕುಲಕ್ಕೆ ಮಾದರಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಫೂರ್ ಸಾಬ್ ಹೇಳಿದರು.
ವಿಶ್ವ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ( ಸ.ಅ) ಅವರ 1500 ನೆಯ ಜನ್ಮ ದಿನದ ಅಂಗವಾಗಿ ಮಾನ್ವಿ ಮುಸ್ಲಿಂ ನೌ ಜವಾನ್ ಕಮಿಟಿ ವತಿಯಿಂದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಾನ್ವಿ ಪಟ್ಟಣದ ಹೃದಯ ಭಾಗದಲ್ಲಿ ಇರುವಂತಹ ಟಿಪ್ಪು ಸುಲ್ತಾನ್ ವೃತದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಮಾನ್ವಿ ಪಟ್ಟಣ ಹಾಗೂ ಪಕ್ಕದ ಹಳ್ಳಿಗಳಿಂದ ಬಂದು ಯುವಕರು ರಕ್ತದಾನ ಮಾಡಿದರು.

ಮಾನ್ವಿ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನೂರಕ್ಕಿಂತ ಹೆಚ್ಚು ದಾನಿಗಳು ರಕ್ತ ನೀಡುವ ಮುಖಾಂತರ ರಕ್ತದಾನ ಶ್ರೇಷ್ಠ ದಾನ ಎಂಬುವುದು ಸಾಬೀತು ಪಡಿಸಿದರು. ಪ್ರಾಸ್ತಾವಿಕ ಮಾತನಾಡಿದ ಮಹಿಬೂಬ್ ಮದ್ಲಾಪುರ “ಜಗತ್ತಿನ ಶಾಂತಿ ದೂತ, ಮಾನವ ಪ್ರೇಮಿ, ಜೀವಿಗಳ ಕರಣಾಮಹಿ, ಧರ್ಮದ ಭೋದನೆಯನ್ನು ಜೀವನದಲ್ಲಿ ನಡೆದಾಡುತ್ತಾ ತೋರಿಸಿ ಕೊಟ್ಟು ತಾವು ದೇವರಾಗದೆ ಕೇವಲ ಅಲ್ಹಾನನ್ನ ಮಾತ್ರ ಸ್ತೋತ್ರಿಸಿದ ಮಾಹಾನ್ ಜ್ಞಾನಿ ನಮ್ಮ ಪ್ರವಾದಿಗಳು, ಅವರ ಹೆಸರಲ್ಲಿ ಜೀವ ಕೊಡಲು ಸಿದ್ದರಿರುವ ಕಾಲದಲ್ಲಿ ರಕ್ತದಾನ ಮಾಡಲು ನಾಮುಂದು ನೀಮುಂದು ಎಂದು ಬಂದಿರುವುದು ಈ ಸಮಾಜಕ್ಕೆ ಒಂದು ಮಾದರಿಯ ಪಾಠವೇ ಸರಿ ಎಂದು ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ಹೇಳಿದರು. ನಂತರ ಸಾರ್ವಜನಿಕರಿಗೆ ಊಟ ವ್ಯವಸ್ಥೆಯನ್ನು ಮಾಡಲಾಗಿತ್ತು ತದನಂತರ ಮಾನ್ವಿ ಟಿಪ್ಪು ಸುಲ್ತಾನ್ ವೃತಯಿಂದ ವಿಜೃಂಭಣೆಯಿಂದ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮೌಲಾನ ಮುಜಾಹಿದುಲ್ ಇಸ್ಲಾಂ ಹಾಗೂ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್ ಮಾನ್ವಿ ತಾಲೂಕು ವೈದ್ಯಾಧಿಕಾರಿ ಶರಣಬಸವ ಮುಷ್ಟೂರ್ ಪುರಸಭೆ ಮಾಜಿ ಸದಸ್ಯರು ಸಾಧಿಕ್ ಹುಸೇನ್ ಖುರೇಶಿ. ಸಂಗಯ್ಯ ತಾತ. ಹಾಗೂ ಕಾಂಗ್ರೆಸ್ ಮುಖಂಡರಾದ ಮಿರ್ಜಾ ಆದಮ್ ಬೇಗ. ಡಾಕ್ಟರ್ ಆಸಿಫ್ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಮೊಹಮ್ಮದ್ ರೆಹಮತ್ ಅಲಿ. ಮೊಹಮ್ಮದ್ ಆಶಿಮ್ ಖುರೇಷಿ. ಮೌಲನ ಮುಸ್ತಫ. ಜಾವಿದ್ ಖಾನ್. ಸೈಯದ್ ಏಕೆ ಜಾಗಿರ್ದಾರ್ ಸಾಹೇಬ್. ಸೈಯದ್ ಏಜಾಜ ಖಾದ್ರಿ. ಮೆಹಬೂಬ್ ಖುರೇಶಿ. ನಾಸಿರ್ ಖುರೇಷಿ. ಮುಸ್ತಫ ಕಪಗಲ್. ಹಫೀಜ್ ಸಂಶೀರ್ ಮುಸ್ತಫಾ ಖುರೇಷಿ. ಕೆ ಸಮೀರ್ ಪಾಷಾ. ಹಬೀಬ್. ಮೌಲಾನ ಮುಜಾಯಿದ ಖುರೇಶಿ. ಮೆಹಬೂಬ್ ಮದ್ಲಾಪುರ್. ಸಮೀರ್ ನಾಯ್ಕ್. ಅಬ್ರರ್ ಖುರೇಷಿ . ಹುಸೇನ್ ಬಾಷಾ. ಮಾಡಿಗೇರಿ ಇಸ್ಮಾಯಿಲ್. ನಬೀ ಚಾಂದ್. ಚಂದಾ ಆಲಂ ಬಾಷಾ. ಬಿಲಾಲ್. ಮುಜೀಬ್ ಅಹಮದ್. ಹಾಗೂ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಹಲವಾರು ಯುವಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ