ಜಾತಿ ಜನ ಗಣತಿಯಲ್ಲಿ ಹಡಪದ ಎಂದು ನಮೂದಿಸಲು ಈರಣ್ಣ.ಸಿ ಹಡಪದ ಸಣ್ಣೂರ – ಸಮುದಾಯದ ಜನರಿಗೆ ಮನವಿ.
ಕಲಬುರ್ಗಿ ಸ.06

ಜಿಲ್ಲೆಯ ಹಾಗೂ ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನ ನಮ್ಮ ಹಡಪದ ಅಪ್ಪಣ್ಣ ಸಮಾಜದ ಜನತೆಗೆ ವಿಶೇಷ ಸೂಚನೆ ತಿಳಿಸುವುದು ಏನೇಂದರೆ ಹಡಪದ ಅಪ್ಪಣ್ಣ ಸಮುದಾಯದ ಸೇರಿದ ಅನೇಕ ಉಪ ಜಾತಿಯ ಪದಗಳು ನಾವಿ. ನಾವಿಂದ. ನಾಯಿಂದ. ನಯನಜ. ಕೆಲಸಿ, ನ್ಹಾವಿ. ಕ್ಷೌರಿಕ. ಕ್ಷೌರ. ಭಂಡಾರಿ. ನಾವಲಿಗ. ಕ್ಷೌರದ ಈ ಹೆಸರುಗಳು ಹಡಪದ ಸಮಾಜದ ಉಪ ಪಂಗಡಗಳಾಗಿದ್ದು. ಈ ಸಮುದಾಯದವರು ದಯವಿಟ್ಟು ತಾವು ತಪ್ಪದೆ ಜಾತಿ ಜನ ಗಣತಿಯಲ್ಲಿ ಈ ಮೇಲಿನ ಎಲ್ಲಾ ಹೆಸರುಗಳು ನಮೂದಿಸದೇ. “ಹಡಪದ” ಎಂದು ನಮೂದಿಸಲು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ.ಸಿ ಹಡಪದ ಸಣ್ಣೂರ ಅವರು ಹಾಗೂ ರಾಜ್ಯದ ಮಾಜಿ ಸಂ.ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಮತ್ತು ಜಿಲ್ಲಾ ಪ್ರದಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ. ಮತ್ತು ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಸಹ ಶಿಕ್ಷಕರು ಹೊನ್ನಕಿರಣಗಿ. ಹಾಗೂ ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಹಾಗೂ ಮಹಾತೇಶ ಇಸ್ಲಾಂಪೂರೆ. ಹಾಗೂ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಆನಂದ ಖೇಳಗಿ, ಸಹ ಸಂ. ಕಾರ್ಯದರ್ಶಿ ಸಂತೋಷ ಬಗದುರಿ, ಸಹ ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನೂರ, ಮಹಾದೇವ ಹಡಪದ ರಾವೂರ, ಹಾಗೂ ಕಲಬುರಗಿ ಜಿಲ್ಲೆಯ ನಗರ ಘಟಕ ಅಧ್ಯಕ್ಷರು ಮಲ್ಲಿಕಾರ್ಜುನ ಸಾವಳಗಿ. ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ ಸೇರಿದಂತೆ ಅನೇಕ ಪದಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದು ಕೊಂಡರು. ಜಾತಿ ಹಡಪದ. ಉಪ ಜಾತಿ ಹಡಪದ. “ಧರ್ಮ ಹಿಂದು” ಎಂದು ನಮೂದಿಸಲು ನಿರ್ಣಯವನ್ನು ತೆಗೆದು ಕೊಳ್ಳಲಾಯಿತು. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಈರಣ್ಣ ಸಿ ಹಡಪದ ಸಣ್ಣೂರ ಅವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.