“ಶಿಕ್ಷಕರ ದಿನಾಚರಣೆಗೆ ಮೆರಗು ತಂದವರು ವಿಶೇಷ, ಮೆಚ್ಚಿನ ಗುರುಗಳು “ಶಂಕ್ರೆಪ್ಪ ಮಾಸ್ತರ್ ದೇವೂರ”…..

ದೇಹಿ ಶಿಷ್ಯರ ಭಾಗ್ಯ ದಾತ

ದೇವಾನು ದೇವತೆಗಳ ನಾಡು ಶರಣರ ಬೀಡು

ಬಸವನಾಡಿನ ವಿಜಯಪೂರ ಜಿಲ್ಲೆಯ ಈಗಿನ

ತಾಲೂಕಾ ಕೇಂದ್ರ ದೇವರ ಹಿಪ್ಪರಗಿ

ನಿಜವಾಗಿಯೂ ಸ್ವರ್ಗದ ಸ್ವರೂಪವು ಪೂಣ್ಯ

ಭೂಮಿ ಇಂಥಹ ಸುಸಂಸ್ಕೃತ ಜನಸಮೂಹ

ವ್ಯಾಪಾರಿ ಪ್ರಮುಖ ಕೇಂದ್ರ ಸುತ್ತಮುತ್ತ

ಗ್ರಾಮಗಳ ಒಡನಾಟ ಉತ್ತಮ ಊರಲ್ಲಿ ಶಿಕ್ಷಣ

ಕ್ಷೇತ್ರ ತನ್ನದೇ ಆದ ಐತಿಹಾಸಿಕತೆಯವನ್ನು

ಹೊಂದಿದೆ. ಒಂದನೆಯ ತರಗತಿ ದಾಖಲಾದ

ಮಕ್ಕಳು ಇವರ ಅಮೃತವಾಣಿ ಕಪ್ಪು ಹಲಗೆಯ

ಮೇಲೆ ಶುದ್ಧ ಹಸ್ತಾಕ್ಷರದ ಪ್ರಭಾವದಿಂದ

ಕಲಿತು ಧನ್ಯರಾದವರನೇಕರು ಶಂಕ್ರೆಪ್ಪ

ಮಾಸ್ತರ್ ದೇವೂರ ಕಂಠ ಸಿರಿಯಿಂದ ಮಕ್ಕಳ

ಆಕರ್ಷಿತ ಪದಗಳು ತಪ್ಪೆಸಗಿದಾಗ ಘಳಂಗ್

ಘಳಂಗ್ ಶಬ್ಧ ಘೋಷದೊಂದಿಗೆ ಬೆತ್ತದ

ಬಡಿತ ಮಕ್ಕಳನ್ನ ಜ್ಞಾನದ ದಾರಿಯಲ್ಲಿರಿಸಿ

ಉತ್ತಮ ಶಿಷ್ಯರನ್ನಾಗಿಸಿದೆ. ಊರಿನ 50-65

ವಯೋಮಾನದವರೆಲ್ಲರೂ ಇವರ ಶಿಷ್ಯರೇ

ಉತ್ತಮ ಸಂಸ್ಕಾರ ನೆಹರು ಶರ್ಟ್ ದ್ಯೋತಿ

ಟೋಪಿಯಲ್ಲಿ ಮಾಸ್ತರ್ ಅಂದರೆ ದೇವೂರ

ಶಂಕ್ರೆಪ್ಪ ಮಾಸ್ತರ್ ಎಂಬ ಹೆಗ್ಗಳಿಕೆ ಹೆಮ್ಮೆ

ಆವಾಗಿನ ಕಾಲದಲ್ಲಿ ಶಾಲೆಯಲ್ಲಿ ಉಪಹಾರದ

ವ್ಯವಸ್ಥೆಯ ಅಚ್ಚುಕಟ್ಟುತನ ಪಾಕಶಾಸ್ತ್ರ

ಪ್ರವೀಣರಂತೆ ಉಪ್ಪಿಟ್ಟಿನ ತಯಾರಿಸಿ

ಪ್ರತಿಯೊಗಮಬ್ಬರೂ ಸವಿ ತಿಂಡಿ ಸವಿದ

ನೆನಪು ಎಂದೂ ಮರೆಯಲಾರರು

ಬಾಯಿಯಲ್ಲಿ ನೀರೂರುವುದು ಪಕ್ಕಾ

ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾನರೀತಿ

ಕಂಡ ಮಹಾನ್ ಶಿಕ್ಷಕರು ಶಾಲಾವಾತಾವರ್ಣ

ಸ್ವಚ್ಚಂದ ಶಿಸ್ತು ಅಂದರೆ ದೇವೂರ ಮಾಸ್ತರ್

ದೇವೂರ ಮಾಸ್ತರ್ ಎಂದರೆ ಶಿಸ್ತು ಇವರ

ಶಿಷ್ಯರು ಗುರುಗಳ ಮಾತು ಹಾಡು ಕಲಿಸುವ

ರೀತಿ ಅಳವಡಸಿಕೊಂಡ ಶಿಸ್ತುಬದ್ಧ ಜೀವನ

ಆದರ್ಶತನ ಊರಿನ ಮೆರಗು ಹೆಚ್ಚಸಿ ಅನೇಕ

ಶಿಷ್ಯರು ಅಳವಡಿಸಿಕೊಂಡು ಅನುಸರಿಸಿ

ಉತ್ತಮ ನಾಗರಿಕರಾಗಿ ಇವರು ಊರ ಹೆಸರಿಗೆ

ಮೆರಗು ತಂದು ಕೀರ್ತಿವಂತರಾಗಿರುವವರು

ಅನೇಕರು ಇಂಥಹ ಮಹಾನ್ ಶಿಕ್ಷಕ ನಾಡ

ದೇಶ ಕಟ್ಟವಲ್ಲಿ ತಮ್ಮ ಜೀವನ

ಮೂಡುಪಾಗಿಟ್ಟವರು ಸರ್ ಶಂಕ್ರೆಪ್ಪ ಮಾಸ್ತರ್

ದೇವೂರ ಶಿಕ್ಷಕರ ದಿನಾಚರಣೆಯ ದಿನ

ಸ್ಮರಿಸುವ ನೆನಪು ನಮ್ಮೆಲ್ಲರ ಭಾಗ್ಯವು. ಬನ್ನಿ

ಊರಿನ ಹೆಮ್ಮೆಯ ಶಂಕ್ರೆಪ್ಪ ಮಾಸ್ತರ್

ದೇವೂರ ಶಿವಾದೀನರಾಗಿದ್ದರೂ ಅವರ

ನೇನಪು ಚಿರವಾಗಿದೆ ಶಿಷ್ಯರ ಮನದಲ್ಲಿ ಇವರ

ಸೇ ವಾ ಸವಿ ನೆನಪಿಗಾಗಿ ಪಟ್ಟಣದ ಪ್ರಮುಖ

ಬೀದಿ ಅಥವಾ ಚೌಕ್ ನಿರ್ಮಿಸಿ

ಗುರುಗಳಿಗೊಂದು ಧನ್ಯತಾ ಭಾವ

ಸಮರ್ಪಿಸೋಣ.

ಗುರುವಿಗೆ ಮೆರಗು ತಂದವರು ಅಕ್ಕರಯ

ಶಿಕ್ಷಕರಿಗೆ ಅಕ್ಷರದ ನಮನಗಳು..

ಶಿಷ್ಯರ ಬಾಳಿಗೆ ಬೆಳಕಾದವರು

ದೇವರ ಹಿಪ್ಪರಗಿಯ ಆದರ್ಶ ಶಿಕ್ಷಕರು

ಶಿಸ್ತು ಅಂದರೆ ಶಂಕ್ರೆಪ್ಪ ಮಾಸ್ತರ್ ದೇವೂರ

ಶಿಷ್ಯೋತ್ತಮರ ಅಚ್ಚುಮೆಚ್ಚಿನ ಗುರುಗಳು

ಅಚ್ಚಳಿಯದೆ ಸದಾ ನೆನಪಿನಂಗಳದಲಿ

ನಮ್ಮ ಹೆಮ್ಮೆ ನಮ್ಮ ಗುರುಗಳು

ಅಮೃತ ಹಸ್ತದಿ ಕಲಿತವರು ಅನೇಕರು

ಶ್ರೀವಾಣಿ ಕೇಳಿದವರು ಹಲವರು

ಶಿಕ್ಷಕರ ದಿನದ ಗೌರವದ

ಪುಷ್ಷವೃಷ್ಠಿಯ ಅನಂತ ನಮನಗಳು

ಇಂತಿ

ದೇವರ ಹಿಪ್ಪರಗಿ ಗೆಳಯರ ಬಳಗ

ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button