ಪ್ರವಾಸಿ ಮಂದಿರ ನಿರ್ಮಾಣಕ್ಕೆ – ₹1 ಕೋಟಿ ಮಂಜೂರು.
ಕೆ.ಹೊಸಹಳ್ಳಿ ಸ.07

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಾನ ಹೊಸಹಳ್ಳಿಯಲ್ಲಿ ನೂತನವಾಗಿ ಪ್ರವಾಸಿ ಮಂದಿರ ಆರಂಭಿಸಲು ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದೆ. ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ, ಶ್ರೀನಿವಾಸ್ ಎನ್.ಟಿ ಇವರ ನಿರಂತರ ಪ್ರಯತ್ನ ಮತ್ತು ಮನವಿಗೆ ಓಗೊಟ್ಟು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ₹1 ಕೋಟಿ ರೂ ಅನುದಾನವನ್ನು ನೀಡಿ ಆದೇಶ ಪತ್ರವನ್ನು ವಿತರಿಸಿದರು. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಾನ ಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ ಮಾರ್ಗದಿಂದ ವಿಜಯನಗರ ಸಾಮ್ರಾಜ್ಯದ ಹಂಪಿ, ಡ್ಯಾಮ್, ಅಂಜನಾದ್ರಿ ಬೆಟ್ಟ, ಹುಲಿಗೆಮ್ಮ ದೇವಸ್ಥಾನ, ಕೊಪ್ಪಳ, ಗದಗ್, ಹುಬ್ಬಳ್ಳಿ ಧಾರವಾಡ, ವಿಜಯಪುರ, ಸೊಲ್ಲಾಪುರ, ಬೆಳಗಾಂ, ಗೆ ಹಾದು ಹೋಗುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರವಾಗಲಿದೆ. ಹೊಸಹಳ್ಳಿ ಹೋಬಳಿಯಲ್ಲಿ 8 ಕ್ಕೂ ಹೆಚ್ಚು ಗ್ರಾ.ಪಂ ಹೋಬಳಿಗೆ ಸೇರುತ್ತವೆ ಒಟ್ಟು 85 ಹಳ್ಳಿಗಳು ಸೇರುತ್ತವೆ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ರೇಷ್ಮೆ ಕಚೇರಿ, ಆಸ್ಪತ್ರೆ, ಬ್ಯಾಂಕುಗಳು ಇತರೆ ಸರಕುಗಳ ಖರೀದಿಸಲು ದಿನ ನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗೂ ಹಲವಾರು ಸರಕಾರಿ ಶಾಲಾ, ಹಾಸ್ಟೆಲ್, ಕಚೇರಿಗಳಿದ್ದು ಸರಕಾರಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು, ಸಾರ್ವಜನಿಕರು, ಶಾಸಕರು, ಸಚಿವರು ಭೇಟಿ ನೀಡಿದಾಗ ಸಭೆ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಶಾಸಕರು ನೂತನ ಪ್ರವಾಸಿ ಮಂದಿರ ನಿರ್ಮಾಣಕ್ಕೆ ನಿರಂತರ ಪ್ರಯತ್ನ ಮತ್ತು ಮನವಿಗೆ ಓಗೊಟ್ಟು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರು ₹1 ಕೋಟಿ ಅನುದಾನವನ್ನು ನೀಡಿ ಆದೇಶ ಪತ್ರವನ್ನು ವಿತರಿಸಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಡಾ, ಶ್ರೀನಿವಾಸ್ ಎನ್.ಟಿ ತಿಳಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

