ಶಾಲೆಯಲ್ಲಿ ಪಾಠದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ಸಹ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು – ಶಾಸಕ ಜಿ.ಎಸ್ ಪಾಟೀಲ್.
ರೋಣ ಸ.07

“ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೊತ್ತು ಕೊಡಲೇ ಬೇಕು ಆಗಾಗಿ ನಮ್ಮ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಮುಂದಿನ ದಿನ ಮಾನಗಳಲ್ಲಿ ಇನ್ನೂ ಅನೇಕ ಕೆಲಸ ಕಾರ್ಯಗಳನ್ನು ಮಾಡಲಿದೆ. ಆಗಾಗಿ ತಮ್ಮ ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ತಯಾರಿ ನಡಸಿದೆ ನಮ್ಮ ಸರ್ಕಾರ ಎಲ್ಲಾ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸುಧಾರಣೆ ತರಬೇಕು. ಭಾರತದ ಭವಿಷ್ಯ ರೂಪಿಸಿಲು ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆ ಯಾಗಿದೆ” ಈ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಸ್ಥಳೀಯ ರೋಣ ಮತ ಕ್ಷೇತ್ರದ ಶಾಸಕ ಜಿ.ಎಸ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸೆಪ್ಟೆಂಬರ್ 6 ಶನಿವಾರ ರಂದು ಗದಗ ಜಿಲ್ಲೆಯ ರೋಣ ತಾಲೂಕ ಪಟ್ಟಣದ ಗುರು ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ರೋಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಗಳು ರೋಣ ಗಜೇಂದ್ರಗಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ತಾಲೂಕ ಶೈಕ್ಷಣಿಕ ತಾಲೂಕ ಮಟ್ಟದ ಡಾಕ್ಟರ್, ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯೆಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಎ.ಸಿ ಗಂಗಾಧರ್ ಉಪನ್ಯಾಸ ಮಾತುಗಳನ್ನು ಮಾತನಾಡಿದರು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಗುರುಪಾದ ಮಹಾಸ್ವಾಮಿಗಳು ಗುಲಗಂಚಿಮಠ ರೋಣ ವಹಿಸಿ ಕೊಳ್ಳುವದರೊಂದಿ ಕೊನೆಯದಾಗಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಾಗರಾಜ್ ಕೆ.ಆರ್ ಎಲ್ ನಾಯಕ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ರೋಣ. ಎಂ.ಎ ಪಣಿಬಂಧ ಕ್ಷೇತ್ರ ಸಮನ್ವಯ ಅಧಿಕಾರಿಗಳು ರೋಣ ವಿ.ಎಲ್ ಗುಡಿಸಗಾರ. ಮಿಥುನ್.ಜಿ ಪಾಟೀಲ. ವಿ.ಬಿ ಸೋಮನಕಟ್ಟಿಮಠ. ವೀರಣ್ಣ ಶೆಟ್ಟರ. ಪ್ರಭು ಮೇಟಿ. ಶರಣಪ್ಪ ಬೆಟಗೇರಿ. ಪರುಶುರಾಮ್ ಅಳಗವಾಡಿ. ಶಿದ್ದಣ್ಣ ಬಂಡಿ.ಹೆಚ್ ಎಸ್ ಸೋಂಪುರು. ಹಣಮಂತಪ್ಪ ದೊಡ್ಡಮನಿ. ಶಿವನಗೌಡ ಪಾಟೀಲ. ರಮೇಶ ಅಂದಾನಪ್ಪ ಪಲ್ಲೆದ. ಬಸವರಾಜ್ ನವಲಗುಂದ. ಮಂಜುಳಾ ಹುಲ್ಲಣ್ಣವರ. ಡಿ ಬಿ ಬಿರಾದಾರ. ವಾಯ್ ಡಿ ಗಾಣಿಗೇರ. ಸೇರಿದಂತೆ ಇನ್ನೂ ಅನೇಕ ಶಿಕ್ಷಕಿಯರು ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ