‘ಗ್ಯಾಂಗ್ಸ್ ಆಫ್ ಯುಕೆ‘ ಚಿತ್ರದ ಟೀಸರ್ – ಬಿಡುಗಡೆ ಮಾಡಿದ ಉಪೇಂದ್ರ.
ಬೆಂಗಳೂರು ಸ.08

ಡೆಡ್ಲಿ ಆರ್ಟ್ಸ್ ಬ್ಯಾನರಡಿಯಲ್ಲಿ ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶೀವತ್ಸ ನಿರ್ಮಾಣ ಮತ್ತು ನಿರ್ದೇಶನದ ‘ಗ್ಯಾಂಗ್ಸ್ ಆಫ್ ಯುಕೆ ‘ ಚಿತ್ರದ ಆಡಿಯೋ ಮತ್ತು ಟೀಸರ್ ಬಿಡುಗಡೆ ಸಮಾರಂಭ ಕಲಾವಿದರ ಸಂಘದ ಆವರಣದಲ್ಲಿ ಜರುಗಿತು. ಅತಿಥಿಗಳಾಗಿ ನಿರ್ಮಾಪಕ ಕೆ.ಮಂಜು, ಉಮೇಶ ಬಣಕಾರ, ರಾಧಾಕೃಷ್ಣ ಅಡಿಗ, ಪ್ರವೀಣ ಉದಯ್, ಸೇತು ಮುಕುಂದನ್, ಥ್ರಿಲ್ಲರ್ ಮಂಜು ಮೊದಲಾದ ಸಿನಿ ಗಣ್ಯರು ಹಾಜರಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರು ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು.

ಸ್ಪೇಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಐ.ಎ ಹಾಗೂ ಸಿ.ಬಿ.ಐ ನ ಪಿ.ಪ್ರಸನ್ನಕುಮಾರ್ ಅವರು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದರು. ಮುಂಬೈ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪ್ರಮಾಣ ಪತ್ರವನ್ನ ೭೨ ದಿನಗಳ ನಿರಂತರ ಅಲೆದಾಟದ ನಂತರ ಪಡೆದು ಕೊಂಡಾಗಿನ ಕಹಿ ಅನುಭವಗಳನ್ನು, ತೊಂದರೆಗಳನ್ನು ಸೆನ್ಸಾರ್ ಮಂಡಳಿಯ ಒಂದೊಂದೇ ಕರ್ಮಕಾಂಡವನ್ನ ನಿರ್ದೇಶಕರಾದ ರವಿ ಶ್ರೀವತ್ಸ ಅವರು ಶ್ರೀಯುತ ಉಪೇಂದ್ರ, ಕೆ ಮಂಜು, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ ಇವರುಗಳ ಮುಂದೆ ಹೇಳಿಕೊಂಡು ಕಣ್ಣೀರಿಟ್ಟರು.

ಬಾಗಲಕೋಟ, ಹೆರಕಲ್, ಶಿರೂರ, ಹುನಗುಂದ, ಇಳಕಲ್ಲ ಸುತ್ತಮುತ್ತ, ಬೆಂಗಳೂರನಲ್ಲಿ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಶಿಶುನಾಳ ಶರೀಫರ ಗೀತೆಗಳನ್ನು ಚಿತ್ರದಲ್ಲಿ ಬಳಸಿ ಕೊಳ್ಳಲಾಗಿದೆ. ರಕ್ತಕ್ಕೆ ರಕ್ತವೇ ಮಜ್ಜನ, ಜಿದ್ದು ಒಬ್ಬರಿಂದ ಒಬ್ಬರಿಗೆ ಹೇಗೆ ವರ್ಗಾಯಿಸಿ ಕೊಂಡು ಹೋಗುತ್ತೇ ಅನ್ನೋ ಕಾನ್ಸೆಪ್ಟ್ ಚಿತ್ರದಲ್ಲಿದೆ.
ತಾರಾಂಗಣದಲ್ಲಿ ಒರಟ ಪ್ರಶಾಂತ್, ಕಿಂಗ್ ಮುನಿ, ಸೋನು ಉಪಾಧ್ಯ, ಪೃಥ್ವಿ ಸುಬ್ಬಯ್ಯ, ಕೆ,ಆರ್ ಅಮೋಘ, ಸತ್ಯ, ಕೋಟೆ ಪ್ರಭಾಕರ, ಬಿ.ನವೀನ ಕೃಷ್ಣ, ಜೋತಿಷ್ ಶೆಟ್ಟಿ, ಪದ್ಮವಾಸಂತಿ, ಉಗ್ರಂ ರೆಡ್ಡಿ, ವಿಕಾಸ ಮದಕರಿ, ಕಿರಣ, ದಿಲ್ಲನ್ ಚೆಂಗಪ್ಪ ಗಜೆಂದ್ರಗಡ, ಮಹಾಂತೇಶ ಹಳ್ಳೂರ, ಅಮೃತ್ ಹಿರಣ್ಯ, ಗುರುರಾಜ ಗೌಡ, ನಂಜು ಸಿದ್ದಪ್ಪ, ರಮೇಶ ಮದಗುಂದ, ಸಕ್ಕರೆನಾಡು ಉಮೇಶ್, ಠಂಕಸಾಲಿ ಉಮೇಶ್ ಅಲ್ಲದೆ ಉತ್ತರ ಕರ್ನಾಟಕದ ಸ್ಥಳಿಯ ಕಲಾವಿದರನ್ನೂ ಇದರಲ್ಲಿ ಬಳಸಿ ಕೊಳ್ಳಲಾಗಿದೆ ಎಂದರು.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಆರ್.ಗಿರಿ ಸಂಭಾಷಣೆ ಎಂ.ಎಸ್ ರಮೇಶ, ಸಂಗೀತ ಸುಕುಮಾರ, ಸಾಹಸ ಥ್ರಿಲ್ಲರ್ ಮಂಜು, ಪ್ರಸಾಧನ ರಾಜೇಶ್, ವಸ್ತ್ರ ವಿನ್ಯಾಸ ಪುಟ್ಟರಾಜು, ಸಂಕಲನ ಎಲ್.ಎನ್ ರೆಡ್ಡಿ , ಡಬ್ಬಿಂಗ್ ಆನಂದ, ಎಫೆಕ್ಟ್ಸ್ ಸೇತು, ಪಿ.ಆರ್.ಓ ನಾಗೇಂದ್ರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ರಾವಣ ಅವರದಿದ್ದು, ಡೆಡ್ಲಿ ಸೋಮ, ಮಾದೇಶ ಚಲನ ಚಿತ್ರಗಳ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ, ಅವರ ನಿರ್ದೇಶನ ಚಿತ್ರಕ್ಕಿದು,
ನಿರ್ಮಾಪಕರು ರಂಗನಾಥ ರವೀಂದ್ರನಾಥ, ಲಕ್ಷ್ಮೀ ನಾರಾಯಣ ರೆಡ್ಡಿ ಆಗಿದ್ದಾರೆ. ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಟೀಸರ್ ಈಗ ಯ್ಯೂಟ್ಯೂಬ್ ದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು ಒಂದೇ ದಿನದಲ್ಲಿ ಒಂದನೂರ ಇಪ್ಪತ್ತೈದು.ಕೆ ದಾಟಿ ಮುನ್ನುಗ್ಗುತ್ತಿದೆ. ಚಿತ್ರ ಅತಿ ಶೀಘ್ರದಲ್ಲಿ ರಾಜ್ಯದಾದ್ಯಂತ ಬಿಡುಗಡೆ ಯಾಗಲಿದೆ. ಚಿತ್ರ ಗೆದ್ದೆ ಗೆಲ್ಲುತ್ತೆ, ಕರ್ನಾಟಕದ ಜನತೆ ಖಂಡಿತ ಗೆಲ್ಲಿಸುತ್ತಾರೆ ಎಂದು ಭರವಸೆ ಇಟ್ಟು ಕೊಂಡಿರುವದಾಗಿ ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ.
** ***
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

