ಕುಕ್ಕುಂದೂರಿನಲ್ಲಿ ಕೊರಗ ಅಭಿವೃದ್ಧಿ ಸಂಘದ – ನೂತನ ಘಟಕ ಉದ್ಘಾಟನೆ.
ಕಾರ್ಕಳ ಸ.08

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಕಾರ್ಕಳ ತಾಲೂಕಿನ ಕುಕ್ಕುಂದೂರು ವಲಯ ಮಟ್ಟದ ನೂತನ ಸಂಘವನ್ನು ಪೊಸನೊಟ್ಟು ಅಂಬೇಡ್ಕರ್ ಭವನದಲ್ಲಿ ದಿನಾಂಕ 7-9-25 ರಂದು ಉದ್ಘಾಟನೆ ನೆರವೇರಿತು.ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಅವರು ದೀಪ ಬೆಳಗಿಸುವುದರ ಮೂಲಕ ನೂತನ ಸಂಘಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಸಮುದಾಯದ ಹಿರಿಯರಾದ ಸುಧಾಕರ ಹಾಗೂ ಗೋಪ ಅವರು ಡೋಲು ಬಾರಿಸುವ ಮೂಲಕ ಸಂಘಟನೆಯ ಕಾರ್ಯಾರಂಭಕ್ಕೆ ಮೆರಗು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀ ಬೊಗ್ರ ಕೊರಗ ಕೊಕ್ಕರ್ಣೆ ಅವರು, ಸಂಘಟನೆಯ ಬಲ ವರ್ಧನೆ ಮತ್ತು ಅದು ಬೆಳೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ನಂತರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯನ್ನು ಒಕ್ಕೂಟದ ನಿಕಟ ಪೂರ್ವ ಕೋಶಾಧಿಕಾರಿ ಸತೀಶ್ ಪೆರ್ಡೂರು ಮತ್ತು ಗೆಳೆಯರ ಬಳಗ ತಂಡದ ಅಧ್ಯಕ್ಷರಾದ ಚಂದ್ರ ಕಳ್ತೂರು ನೆರವೇರಿಸಿದರು.

ಸರ್ವಾನುಮತದಿಂದ ಆಯ್ಕೆಯಾದ ಪದಾಧಿಕಾರಿಗಳ ವಿವರ ಹೀಗಿದೆ:-
ಅಧ್ಯಕ್ಷರು: ಶ್ರೀಮತಿ ಶಶಿಕಲಾ ಪಡ್ಯ, ಉಪಾಧ್ಯಕ್ಷರು: ಶ್ರೀ ಸುಧಾಕರ ಕುಕ್ಕುಂದೂರು, ಕಾರ್ಯದರ್ಶಿ: ಶ್ರೀಮತಿ ಗೀತಾ ಪೊಸನೊಟ್ಟು, ಕೋಶಾಧಿಕಾರಿ: ವಸಂತ, ಜೊತೆ ಕಾರ್ಯದರ್ಶಿ: ಕುಮಾರಿ ಲಿಖಿತ, ಒಕ್ಕೂಟದ ಪದಾಧಿಕಾರಿಗಳಾಗಿ ಶ್ರೀಮತಿ ಉಷಾ ಪೊಸನೊಟ್ಟು ಮತ್ತು ಸುಜಯ ಕುಕ್ಕುಂದೂರು ಆಯ್ಕೆ ಯಾದರು.

ಜಿಲ್ಲಾ ಸಮಿತಿಗೆ ಶ್ರೀಮತಿ ಸುರೇಖಾ ಪೊಸನೊಟ್ಟು ಮತ್ತು ಪವಿತ್ರ ಪೊಸನೊಟ್ಟು ಆಯ್ಕೆ ಗೊಂಡರೆ, ತಾಲೂಕ ಸಮಿತಿಗೆ ಪ್ರತೀಶ ಮತ್ತು ಲೀಲಾವತಿ ಅವರನ್ನು ಆಯ್ಕೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಪೆರ್ಡೂರು ಸ್ವಾಗತಿಸಿ, ಚಂದ್ರ ಕಳ್ತೂರು ವಂದನಾರ್ಪಣೆ ಮಾಡಿದರು.
ವರದಿ:ಆರತಿ.ಗಿಳಿಯಾರು.ಉಡುಪಿ

