ಶ್ರೀ ಗಜಾನನ ಮಹಾ ಮಂಡಳಿ ವತಿಯಿಂದ ಏಕಕಾಲಕ್ಕೆ – 9 ಗಣೇಶ ಮೂರ್ತಿಗಳನ್ನು ವಿಸರ್ಜನೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಲಕೇರಿ ಸ.08

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಈ ವರ್ಷದ ಕಲಕೇರಿಯಲ್ಲಿ ಶ್ರಿ ಗಜಾನನ ಮಹಾ ಮಂಡಳಿ ಕಲಕೇರಿ ಇವರ ನೇತೃತ್ವದಲ್ಲಿ ದಿನಾಂಕ:- 6.9.2025 ರಂದು ನಡೆದ ಏಕಕಾಲಕ್ಕೆ 9 ಗಣೇಶ ಮೂರ್ತಿಯನ್ನು ವಿಸರ್ಜನೆ ಜರುಗಿತು. ನಮ್ಮ ವಿಜಯಪುರ ಜಿಲ್ಲೆಯ ಅಲಮೇಲ್ ಗ್ರಾಮದಲ್ಲಿ ನಡೆಯುವಂತ 20 ವರ್ಷಗಳ ಕಾಲ ನಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಅಲಮೇಲ್ ಗ್ರಾಮದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರಲ್ಲಿ ನಂಬರ್ ಒನ್ ಅಲಮಮೇಲ ಗ್ರಾಮ ಎಂಬ ಹೆಸರು ಪಡೆದ ಅದರಂತೆ ತಾಳಿಕೋಟಿ ತಾಲೂಕಿನ ಈ ವರ್ಷ ಕಲಕೇರಿ ಗ್ರಾಮದಲ್ಲಿ ಬಹಳ ಸುಂದರವಾಗಿ ಶ್ರೀ ಗಜಾನನ ಮಹಾ ಮಂಡಳಿಯ ನೇತೃತ್ವದಲ್ಲಿ 11 ದಿವಸಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಮಾಡಿದರು. ಏಕಕಾಲಕ್ಕೆ 9 ಗಣೇಶ ಮೂರ್ತಿಗಳನ್ನು ವಿಸರ್ಜನೆ ನಡೆದಂತ ಕಲಕೇರಿ ಎರಡು ನಂಬರ್ ಎಂದು ಕಲಕೇರಿಯ ಹಾಗೂ ಸುತ್ತಮುತ್ತ ಹಳ್ಳಿಯ ಜನರು ಸೇರಿದಂತೆ ಬಹಳ ವಿಜೃಂಭಣೆಯಿಂದ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾ ನಡೆದರು.

ಶ್ರೀ ಗಜಾನನ ಮಹಾ ಮಂಡಳಿಯ. ಗೌರವ ಅಧ್ಯಕ್ಷರಾದ ಸಂಗಾರೆಡ್ಡಿ ದೇಸಾಯಿ. ಅಧ್ಯಕ್ಷರಾದ. ಎಂ.ಪಿ.ನದಾಫ್ ನಿವೃತ್ತಿ ಶಿಕ್ಷಕರು. ಉಪಾಧ್ಯಕ್ಷರಾದ ವಿಶ್ವನಾಥ್ ಸಬರದ. ಕಾರ್ಯದರ್ಶಿಗಳು ಹಣಮಂತ ವಡ್ಡರ್. ಹಾಗೂ ಎಲ್ಲಾ ಸದಸ್ಯರು ಸೇರಿ 9 ಗಣೇಶ ಮೂರ್ತಿಗಳನ್ನು ವೀಕ್ಷಣೆ ಮಾಡಿ ಬಹುಮಾನಗಳನ್ನು ವಿತರಣೆ ಮಾಡಿದರು. ವಿವೇಕಾನಂದ್ ನಗರ ಮೊದಲನೇ ಬಹುಮಾನ. ಹಾಗೂ ಎರಡನೇ ಬಹುಮಾನ ಊರ ಅಗಸಿ ಮಹಾ ಮಂಡಳಿ ಇವರಿಗೆ. ಹಾಗೂ ಮೂರನೇ ಬಹುಮಾನ ಸೇವಾಲಾಲ್ ಮಂಡಳಿ ಇವರಿಗೆ. ಪ್ರಶಸ್ತಿಗಳನ್ನು ನೀಡಿದರು 9 ಗಣೇಶ ಮಂಡಳಿಯವರಿಗೆ ಸನ್ಮಾನ ನೆರವೇರಿಸಿದರು. ಎಲ್ಲಾ ಕಾರ್ಯಕ್ರಮಗಳು ಬಹಳ ಶಾಂತಿ ರೀತಿಯಿಂದ ನಡೆಯಿತು ಹಾಗೂ ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಸುರೇಶ್ ಮಂಟೂರ್ ಇವರಿಗೆ ಮಹಾ ಮಂಡಳಿ ವತಿಯಿಂದ ಗೌರವ ಸನ್ಮಾನ ನೆರವೇರಿತು. ಕಲಕೇರಿ ಕೆ.ಎ.ಬಿ. ಸಿಬ್ಬಂದಿ ಅವರಿಗೆ ಸನ್ಮಾನ ನಡೆಯುತು. ಈ ವರ್ಷದ ಶ್ರೀ ಗಜಾನನ ಮಹಾ ಮಂಡಳಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ಏಕಕಾಲಕ್ಕೆ 9 ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಜರುಗಿಸಿ ಅತ್ಯಂತ ವಿಜೃಂಭಣೆಯಿಂದ ವಿಸರ್ಜನೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಮ್.ಬಿ. ಮನಗೂಳಿ.ತಾಳಿಕೋಟೆ