ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಸರಣೆ ಯಿಂದ ಸಮರ್ಥ ರಾಷ್ಟ್ರ ನಿರ್ಮಾಣ ಸಾಧ್ಯ – ಅಭಿಷೇಕ್ ಚಕ್ರವರ್ತಿ ಅಭಿಮತ.
ಚಳ್ಳಕೆರೆ ಸ.08

ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಸರಣೆಯಿಂದ ಸಮರ್ಥ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಶ್ರೀಅಭಿಷೇಕ್ ಚಕ್ರವರ್ತಿ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ ಯುವತಿಯರಿಗಾಗಿ ಆಯೋಜಿಸಿದ್ದ “ವಿಶೇಷ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.

ಸ್ವಾಮಿ ವಿವೇಕಾನಂದರರು ತಿಳಿಸಿದಂತೆ ಭಾರತದ ಆತ್ಮ ಧರ್ಮ ಆಧ್ಯಾತ್ಮವಾಗಿದ್ದು ಅದರ ಭಾಗವಾದ ವೇದ ಉಪನಿಷತ್ತು ಭಗವದ್ಗೀತೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದರಲ್ಲಿರುವ ಜೀವನ ಮೌಲ್ಯಗಳನ್ನು ಅಳವಡಿಸಿ ಕೊಂಡರೆ ವ್ಯಕ್ತಿ ನಿರ್ಮಾಣ ಸಹಜವಾಗಿಯೇ ಆಗುತ್ತದೆ, ತನ್ಮೂಲಕ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರೆ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.

ತರಗತಿಯಲ್ಲಿ ವೆಂಕಟಲಕ್ಷ್ಮಮ್ಮ, ಜಿ.ಯಶೋಧಾ ಪ್ರಕಾಶ್, ಮಂಜುಳ ಉಮೇಶ್,ಕೆ.ಎಸ್ ವೀಣಾ,ಸುಕೃತಾ,ಚೇತನ್, ಸಂತೋಷ್, ಅಂಬಣ್ಣ,ಮೌರ್ಯ, ಲೋಹಿತ್ ಕುಮಾರ್, ಪುಷ್ಪಲತಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.