ಪ್ರಾರ್ಥನೆ ನಿತ್ಯ ಬದುಕಿನ ಆತ್ಮ ನಿವೇದನೆಯ ಸಾಧನೆಯಾಗ ಬೇಕು – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಸ.08

ಪ್ರಾರ್ಥನೆ ಎನ್ನುವುದು ನಿತ್ಯ ಬದುಕಿನ ಆತ್ಮನಿವೇದನೆಯ ಸಾಧನೆಯಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಉಷಾ ಶ್ರೀನಿವಾಸಲು ಅವರ ಗಾಂಧಿನಗರದ ವಿಶ್ವಾತ್ಮ ಕೃಪಾ ನಿವಾಸದಲ್ಲಿ ಶ್ರೀಶಾರದಾಶ್ರಮದಿಂದ ಆಯೋಜಿಸಿದ್ದ “ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಸತ್ಸಂಗ”ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಸತ್ತ್ವ, ರಜಸ್ಸು ತಮೋಗುಣಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಆಧ್ಯಾತ್ಮಿಕ ಸಾಧನೆಯ ಪ್ರಗತಿಗೆ ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಕೃಪೆಯೂ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಪ್ರಾರ್ಥನಾದಿ ಸಾಧನೆಗಳಿಂದ ಮೂರು ಗುಣಗಳಲ್ಲಿ ಒಂದಾದ ಸತ್ತ್ವ ಗುಣವನ್ನು ಮೀರಿ ಭಗವಂತನ ಒಲುಮೆ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ವಿಶೇಷ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀಲಲಿತಾ ಸಹಸ್ರನಾಮ” ಪಾರಾಯಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಉಷಾ ಶ್ರೀನಿವಾಸಲು, ರುಕ್ಮಿಣಿ, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ ಗುಂಡಲ, ಎಂ ಗೀತಾ ನಾಗರಾಜ್,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಸುವರ್ಣಮ್ಮ, ಎಂ ಗೀತಾ ಪ್ರಕಾಶ್, ಶ್ರೀಮತಿ ಜಿ ಯಶೋಧಾ ಪ್ರಕಾಶ್,ವಿಜಯಲಕ್ಷ್ಮೀ, ಕೆ.ಎಸ್ ವೀಣಾ,ಅಂಬುಜಾ, ಶೈಲಜ, ಕೃಷ್ಣವೇಣಿ, ರಶ್ಮಿ ವಸಂತ, ರಶ್ಮಿ ರಮೇಶ್, ಭಾಗ್ಯಲಕ್ಷ್ಮೀ, ಭ್ರಮರಂಭಾ,ಯತೀಶ್ ಎಂ ಸಿದ್ದಾಪುರ, ಯಶಸ್ವಿ, ಬಸವರಾಜ್, ವೆಂಕಟಲಕ್ಷ್ಮೀ, ಮಂಜುಳ, ಕಾಲುವೆಹಳ್ಳಿ ಪಾಲಕ್ಕ, ಬೋರಕ್ಕ, ಪ್ರೇಮಲೀಲಾ, ಪಂಕಜ, ಅನಿತಾ, ಸುಧಾಮಣಿ, ಚೇತನ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.