ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ಸಿಸಿ – ರಸ್ತೆ ನಿರ್ಮಾಣ ಗುದ್ದಲಿ ಪೂಜೆ.
ಕರಕುಚ್ಚಿ ಸ.08

ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲಿ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ರವರು ಹೇಳಿದರು. ಅವರು ಕರಕುಚ್ಚಿ ಗ್ರಾಮದಲ್ಲಿ ದಿನಾಂಕ 6-9-2025 ರಂದು ಏರ್ಪಡಿಸಿದ್ದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕಟ್ಟಡದ ಗುದ್ದಲಿ ಪೂಜೆ ಮತ್ತು ಕರಕುಚ್ಚಿ ಕಾಲೋನಿಯಲ್ಲಿ 10 ಲಕ್ಷ ರೂಗಳ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಮತ್ತು ಸಿದ್ದೇಗೌಡ ಸರ್ಕಲ್ ನಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಉದ್ಘಾಟನೆ ಮಾಡಿ ಮಾತನಾಡಿದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ತರೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನಗಳನ್ನು ಬಿಡುಗಡೆ ಮಾಡಿದ್ದು ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಸಿದ್ದರಾಮಯ್ಯರವರ ಕೈ ಬಲ ಪಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ ಉಪಾಧ್ಯಕ್ಷರಾದ ಶಾಂತಿಬಾಯಿ ಸದಸ್ಯರಾದ ರೇಖಾ ತಮ್ಮಣ್ಣ, ಪ್ರಕಾಶ್, ಪದ್ಮಶ್ರೀ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು