ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಘದ 10 ನೇ. ವಾರ್ಷಿಕ ಮಹಾ ಸಭೆ – ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಲಾಭ.
ಮಾನ್ವಿ ಸ.08

ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ 10 ನೇ. ವಾರ್ಷಿಕ ಮಹಾ ಸಭೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ನೂರಾರು ಸದಸ್ಯರು ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಷ.ಬ್ರ ವಿರೂಪಾಕ್ಷ ಪಂಡಿತಾರಾಧ್ಯ ಮಹಾ ಸ್ವಾಮಿಗಳು ಕಲ್ಮಠ ಮಾನ್ವಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಭೆಯನ್ನು ವಿಕಾಸ ಸೌಹಾರ್ದ ಕೋ ಅಪರೇಟಿವ್ ಬ್ಯಾಂಕ್ ಹೊಸಪೇಟೆಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಬೆಂಗಳೂರು ಮಾಜಿ ಅಧ್ಯಕ್ಷರಾದ ಶ್ರೀ ವಿಶ್ವನಾಥ ಹಿರೇಮಠ ಉದ್ಘಾಟಿಸಿ, ಸಂಘದ ಉಪಾಧ್ಯಕ್ಷರಾದ ಶ್ರೀ ಚಂದ್ರಕಾಂತ ಇಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಭೆಗೆ ಪ್ರಮುಖ ಅತಿಥಿಗಳಾಗಿ ವಿಷ್ಣು ವಿಲಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಸಿರುಗುಪ್ಪದ ಅಧ್ಯಕ್ಷರು ಶ್ರೀ ಹನುಮಂತಯ್ಯ ಶೆಟ್ಟಿ, ಶ್ರೀ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಮಸ್ಕಿಯ ಅಧ್ಯಕ್ಷರು ಡಾ, ಶಿವಶರಣಪ್ಪ ಇತ್ತಿ, ನಿವೃತ್ತ ಸಹಾಯಕ ನಿಬಂಧಕರು ಶ್ರೀ ಲಿಯಾಖತ್ ಅಲಿ, ಮಾನ್ವಿ ಪಟ್ಟಣ ಸೌಹಾರ್ದ ಬ್ಯಾಂಕ್ ನಿ, ಮಾನ್ವಿಯ ಜನರಲ್ ಮ್ಯಾನೇಜರ್ ಶ್ರೀ ನಾಗರಾಜ, ತಾವರಗೇರ ಪಟ್ಟಣ ಸೌಹಾರ್ದ ಬ್ಯಾಂಕ್ ನಿ, ಸಿ.ಇ.ಓ ಶ್ರೀ ಆದನಗೌಡ ಪಾಟೀಲ್, ಶ್ರೀಲಕ್ಷ್ಮೀ ರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಮಾನ್ವಿಯ ಅಧ್ಯಕ್ಷರು ಶ್ರೀ ರವಿಕುಮಾರ ಪಾಟೀಲ್, ಪಂಚಮುಖಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ರಾಯಚೂರಿನ ಅಧ್ಯಕ್ಷರು ಶ್ರೀ ಮರೇಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರು ಶ್ರೀ ದತ್ತಾತ್ರೇಯ ಮೇಟಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಸಾಮಾನ್ಯ ಸಭೆಯ ವರದಿಯನ್ನು ಸಿ.ಇ.ಓ ಶ್ರೀ ವೆಂಕಟೇಶ ಇಲ್ಲೂರು ಮಂಡಿಸಿದರು. ಕ್ಷೇತ್ರಾಧಿಕಾರಿ ಶ್ರೀ ವಿನೋದ್ ಕುಮಾರ ಲೆಕ್ಕ ಪರಿಶೋಧನಾ ವರದಿ ಮಂಡಿಸಿದ್ದು, 2024-25 ನೇ. ಸಾಲಿನ ಆಯವ್ಯಯ ವರದಿಯನ್ನು ಅಧಿಕಾರಿಗಳಾದ ಶ್ರೀ ದೇವರಾಜ ಪ್ರಸ್ತುತ ಪಡಿಸಿದರು. ಸಹಾಯಕ ಸಿಬ್ಬಂದಿ ಶ್ರೀ ಲಿಂಗರಾಜ ಮೇಟಿ 2025-26 ನೇ. ಸಾಲಿನ ಮುಂಗಡ ಪತ್ರ ಮಂಡಿಸಿದರು.

2024-25 ನೇ. ಸಾಲಿನಲ್ಲಿ ಸಂಘವು ಒಟ್ಟು ರೂ. 12,36,81,597.59 ಆದಾಯ ಗಳಿಸಿದ್ದು, ಠೇವಣಿದಾರರಿಗೆ ಬಡ್ಡಿ ಹಾಗೂ ಇತರ ವೆಚ್ಚಗಳನ್ನು ಪಾವತಿಸಿದ ಬಳಿಕ ನಿವ್ವಳ ರೂ. 1,18,23,868.54 ಲಾಭ ಗಳಿಸಿದೆ. ಸೌಹಾರ್ದ ಕಾಯ್ದೆಯ ಪ್ರಕಾರ ಈ ಲಾಭವನ್ನು ವಿವಿಧ ನಿಧಿಗಳು ಹಾಗೂ ಸದಸ್ಯರ ಕಲ್ಯಾಣಕ್ಕಾಗಿ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ 2024-25 ನೇ. ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಾಸ್ಟರ್ ಅಮರೇಶ ಮಜ್ಜಗಿ, ಎರಡನೇ ತರಗತಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ, ವೀರಭದ್ರ ಮಜ್ಜಗಿ ಅವರಿಂದ ಗಾಂಧಾರಿ ವಿದ್ಯೆ ಹಾಗೂ ಏಕಲವ್ಯ ವಿದ್ಯೆಗಳ ಪ್ರದರ್ಶನ ನೆರವೇರಿತು. ಈ ಕಲಾ ಪ್ರದರ್ಶನ ಅತಿಥಿಗಳು ಹಾಗೂ ಸದಸ್ಯರಿಂದ ಭಾರೀ ಮೆಚ್ಚುಗೆ ಪಡೆದಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

