ಸರ್ಕಾರಿ ಶಾಲಾ ಮಕ್ಕಳಿಗೆ – ಪುಸ್ತಕ, ಪೆನ್ನು ವಿತರಣೆ.
ಸಕಲಾಪುರಹಟ್ಟಿ ಸ.08

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ಸಕಲಾಪುರಹಟ್ಟಿ ಗ್ರಾಮದಲ್ಲಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಯುತರಾದ ಜಯದೇವಮೂತಿ೯ ಅವರ ದಿವಂಗತ ಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ನವರ ಜನುಮ ದಿನದ ಪ್ರಯುಕ್ತ ಸಕಲಾಪುರದಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು, ಜ್ಯಾಮಿಟ್ರಿ, ಮಹನೀಯರ ಜೀವನ ಚರಿತ್ರೆ ಪುಸ್ತಕಗಳು, ಮಕ್ಕಳಿಗೆ ನೀತಿ ಕಥೆಯ ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಿಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಎಚ್.ಮಲ್ಲಾಚಾರಿ ಮುಖ್ಯೋಪಾಧ್ಯಾಯರು ವಹಿಸಿದ್ದರು, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರು ಆದ ಶ್ರೀಮತಿ ದಯಾ ಪುತ್ತೂರ್ಕರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಶ್ರೀಯುತ ಜಯದೇವ ಮೂರ್ತಿ ಅವರ ದಿವಂಗತ ಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ನವರ ಜನುಮ ದಿನದ ಪ್ರಯುಕ್ತ ಪ್ರತಿ ವರ್ಷವೂ ಈ ರೀತಿಯ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನಡೆಸಿ ಕೊಂಡು ಬರುತ್ತಿದ್ದಾರೆ. ಶಾಲಾ ಮಕ್ಕಳಿಗೆ ಅತ್ಯಗತ್ಯವಾದ ವಸ್ತುಗಳು ಪೆನ್ನು, ಪುಸ್ತಕ, ಜ್ಞಾನ ಪಸರಿಸುವ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಮತ್ತು ಮಕ್ಕಳಿಗೆ ಹಾಗೇಯೇ ಶಾಲಾ ಅಧ್ಯಾಪಕರಿಗೆ ನೀಡಿ ಅದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಹೇಳಿದರು. ಅವರೊಂದಿಗೆ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸದಸ್ಯರಾದ ಡಾ, ಗೌರಮ್ಮ, ತಿಪ್ಪೀರಮ್ಮ ಸಕಲಾಪುರದಟ್ಟಿ, ತಿಪ್ಪಮ್ಮ,ಶಾರದ ಜೈರಾಂ, ಪಂಡ್ರಳ್ಳಿ ಶಿವರುದ್ರಪ್ಪ, ಜಯದೇವ ಮೂರ್ತಿ,ಪರಿಸರ ಜಾಗೃತಿ ಕಲಾ ತಂಡದವರು ಮತ್ತು ಅಧ್ಯಾಪಕರಾದ ಉಮೇಶ್, ಸಾವಿತ್ರಿ, ತ್ರಿವೇಣಿ, ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ ಹೊಸಹಳ್ಳಿ