ಸಮ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರುಗಳ ಹೋರಾಟ – ಜಿ.ಹೆಚ್ ಶ್ರೀನಿವಾಸ್.
ತರೀಕೆರೆ ಸೆ.08

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು, ಕನಕದಾಸರು, ಬಸವಣ್ಣ, ಸರ್ವಜ್ಞರು, ಗುರುನಾನಕರು, ಅಂಬೇಡ್ಕರ್, ಗಾಂಧೀಜಿ ರವರು ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಶಾಸಕರಾದ ಜಿ.ಹೆಚ್ ಶ್ರೀನಿವಾಸ್ ಹೇಳಿದರು. ಅವರು ನಾಡ ಹಬ್ಬಗಳ ಸಮಿತಿ ಮತ್ತು ಆರ್ಯ ಈಡಿಗ ಸಮಾಜದವರು ತಾಲೂಕ ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ. ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸಮಾಜಕ್ಕಾಗಿ ಸೇವೆ ಸಲ್ಲಿಸಿದವರನ್ನು ದೇವರಂತೆ ಜನರು ಪೂಜಿಸುತ್ತಾರೆ. ಆರ್ಯ ಈಡಿಗ ಸಮಾಜ ಸಣ್ಣದಾದರೂ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರನ್ನು ಅವರು ಮಾಡಿದ ಯೋಜನೆಗಳನ್ನು ಮರೆಯುವಂತಿಲ್ಲ. ಸಣ್ಣ ಸಮಾಜಗಳು ಒಗ್ಗಟ್ಟಾಗ ಬೇಕು, ನಾರಾಯಣ ಗುರು ಸಮುದಾಯ ಭವನ ದೇವಸ್ಥಾನಕ್ಕೆ ಧನ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಮಾತನಾಡಿ ಈಡಿಗ ಸಮಾಜ ದೊಡ್ಡದಾಗಿ ಬೆಳೆದಿದೆ ರಾಜಕೀಯವಾಗಿಯೂ ಸಹ ಬೆಳೆಯಲಿ ಎಂದು ಹೇಳಿದರು. ಪ್ರಾಧ್ಯಾಪಕರಾದ ಪ್ರತಿಭಾ ಶಂಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದರು, ಬಾಲ್ಯ ವಿವಾಹ, ಬಹು ಪತ್ನಿತ್ವ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಎಂಬ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಿದರು ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಪ್ರಾಣಿ ಬಲಿಯನ್ನು ನಿಲ್ಲಿಸಿದರು ದಲಿತರೊಂದಿಗೆ ಸಹ ಭೋಜನ ಮಾಡಿದ್ದಾರೆ ಮತ್ತು ದಲಿತರಗಾಗಿಯೇ 60 ದೇವಸ್ಥಾನಗಳನ್ನು ನಿರ್ಮಿಸಿದರು, ಶಿಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಟಿ.ಎಸ್ ಪ್ರಕಾಶ್ ವರ್ಮಾ ಸಮಾಜದ ಮುಖಂಡರಾದ ಟಿಟಿ ರಾಘವೇಂದ್ರ, ಮನೋಜ್ ಕುಮಾರ್, ಚಂದ್ರಶೇಖರ್, ಕೃಷ್ಣಮೂರ್ತಿ, ಅಜಯ್ ಮತ್ತು ಪುರಸಭಾ ಉಪಾಧ್ಯಕ್ಷರಾದ ಪಾರ್ವತಮ್ಮ ತಿಮ್ಮಯ್ಯ ಮಧುಸೂದನ್ ಆರಕ್ಷಕ ಉಪನಿರೀಕ್ಷಕರಾದ ಶಶಿಕುಮಾರ್,ಗಜೇಂದ್ರಪ್ಪ, ಸುರೇಶ್ ಹಾಗೂ ತಹಸಿಲ್ದಾರ್ ವಿಶ್ವಜಿತ್ ಮಹೇತ, ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ, ನರಸಿಂಹಮೂರ್ತಿ, ಪ್ರಮೋದ್,ತೇಜಸ್ವಿ, ಶೀಲಾವತಿ, ಸುಜಾತ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು