‘ಸುಳಿ’ ಆಡಿಯೋ ಮತ್ತು – ಟ್ರೈಲರ್ ಬಿಡುಗಡೆ.
ಬೆಂಗಳೂರು ಸ.10

ಸಹಸ್ರ ಕೋಟಿ ಮೂವೀ ಎಂಟರ್‌ಟೈನ್‌ಮೆಂಟ್ ಅರ್ಪಿಸುವ “ಸುಳಿ” ಕನ್ನಡ ಚಲನ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಯ ಸಮಾರಂಭ ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಸಾಹಿತಿ, ಮಾಜಿ ವಿಧಾನಸಭಾ ಸದಸ್ಯರು, ಮಾಜಿ ಸಚಿವರೂ ಆದ ಬಿ.ಟಿ.ಲಲಿತಾ ನಾಯಕ್, ನಾಯಕ ನಟಿ ಭವ್ಯ, ಸುಚೇಂದ್ರ ಪ್ರಸಾದ್ ಆಗಮಿಸಿ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರಲ್ಲದೆ ಮಹಿಳಾ ನಿರ್ದೇಶಕಿ ರಶ್ಮೀ ಅವರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು. ಶ್ರೀ ಕಬ್ಬಾಳಮ್ಮನ ಮಹಿಮೆ ‘ಮನೆ’ ಮತ್ತು ‘ಬ್ಯಾಂಕ್ ಲೋನ್’ ‘ಸುಮ’ ಚಿತ್ರದ ನಿರ್ದೇಶಕರಾದ ರಶ್ಮಿ ಎಸ್ ರವರು ಈ ಚಿತ್ರದ ನಿರ್ದೇಶನ ಮಾಡಿದ್ದು ಇದು ಪವಳಕಾಯಿ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಮೂಲ ಚಿನ್ನಪ್ಪ ಭಾರತಿಯವರು ಬರೆದಿರುವ ತಮಿಳಿನ ಪವಳಾಯಿ, ಮತ್ತು ಕನ್ನಡಕ್ಕೆ ಅದೇ ಹೆಸರಿನಲ್ಲಿ ಅನುವಾದ ಮಾಡಿರುವ ಡಾ, ಕೆ.ಪದ್ಮನಾಭ ಉಡುಪ ಅವರದ್ದಾಗಿದೆ. ಈ ಚಿತ್ರದ ಕಥೆಯು ೧೯೭೦ ನೇ. ಇಸವಿಯಲ್ಲಿ ನಡೆಯುವ ಕಥಾ ಹಂದರವಿದ್ದು ಇಡೀ ಚಿತ್ರದ ಕಥೆಯು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಪ್ರತಿಯೊಬ್ಬ ವ್ಯಕ್ತಿಯು ಜೀವನವೆಂಬ ಸುಳಿಯಲ್ಲಿ ಸಿಲುಕಿದ ಮೇಲೆ ಅದೆಲ್ಲ ಸುಳಿಗಳಿಂದ ಹೇಗೆ ಮುಕ್ತಿ ಪಡೆಯುತ್ತಾನೆ? ಹೇಗೆ ಎಲ್ಲಾ ಸಂಬಂಧಗಳನ್ನು ನಿಭಾಯಿಸುತ್ತಾನೆ? ಎಂಬುದೇ ಚಿತ್ರದ ಕಥಾಹಂದರ. ಚಿತ್ರದಲ್ಲಿ ಕಲಾವಿದರಾದ ಸನತ್ ಚೈತ್ರ, ಪಿ.ಸಂಜನಾ ನಾಯ್ಡು, ಶಿವಕುಮಾರ್ ಆರಾಧ್ಯ, ಶಂಕರ್ ನಾರಾಯಣ್, ಕಾವ್ಯ ಪ್ರಕಾಶ್, ಮಂಡ್ಯ ಸಿದ್ದು, ಹರಿಹರನ್ ಬಿ.ಪಿ, ಮೊದಲಾದವರ ತಾರಾಗಣವಿದೆ. ಮಂಡ್ಯ, ಮದ್ದೂರು, ರಾಮನಗರದ ಸುತ್ತಮುತ್ತ ಒಟ್ಟು ೨೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡುಗಳಿದ್ದು. ಎನ್.ರಾಜು ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ ಶಿವಸತ್ಯ ಅವರದಿದೆ. ವಿಕ್ರಂ ಯೋಗಾನಂದ್ ದೇವೂ ಛಾಯಾಗ್ರಹಣ, ಸಂಕಲನ ಮುತ್ತುರಾಜ.ಟಿ ಸಾಹಿತ್ಯ ಸತೀಶ್ ಜೋಶಿ ಹಾವೇರಿ, ಸಂಭಾಷಣೆ ಆರಾಧ್ಯ ಮುತ್ತುರಾಜು.ಟಿ ಪತ್ರಿಕಾ ಸಂಪರ್ಕ ಕಾರ್ತಿಕ್ ಸುಧನ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಪ್ರಚಾರಕಲೆ ದೇವೂ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ ಪಿ ಅವರದ್ದಾಗಿದೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಚಿಕ್ಕಹೊಸಗಾವಿಯ ಬೆಟ್ಟಸ್ವಾಮಿ ಗೌಡರವರು (ಬಿ.ಎಸ್ ಗೌಡ) ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಸದ್ಯ ಇದೆ ತಿಂಗಳು ನಡೆಯುತ್ತಿರುವ ಮೈಸೂರು ದಸರಾ ಚಲನ ಚಿತ್ರೋತ್ಸವ-೨೦೨೫ ಕ್ಕೆ ‘ಸುಳಿ’ ಚಿತ್ರ ಆಯ್ಕೆ ಆಗಿದ್ದು ಚಿತ್ರ ತಂಡಕ್ಕೆಲ್ಲ ಖುಷಿ ತಂದಿದೆ ಎಂದು ನಿರ್ದೇಶಕಿ ರಶ್ಮಿ ಎಸ್ ಹೇಳಿದರು.
*****
ಡಾ, ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬