ಬಸ್ ಬಾರದ ಹಿನ್ನೆಲೆ ಶಾಲಾ ಕಾಲೇಜು – ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಸೀಕಲ್ ಸ.10





ಆಳುವ ಸರ್ಕಾರಕ್ಕೆ ಧಿಕ್ಕಾರ ಇರಲಿ ಭವ್ಯ ಭವಿಷ್ಯದ ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟ ಆಡುವುದು ಬಿಟ್ಟು ತ್ವರಿತ ಗತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು…..
ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗ ಬೇಕಾದ ಸರಕಾರ ಮಾನ್ವಿ ತಾಲೂಕಿನ ಸೀಕಲ್ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸೀಕಲ್ ಗ್ರಾಮದ ಮೂಲಕ ಬರುವ ಬಸ್ ಅದ್ಯಾವಾಗ ಬರುತ್ತೆ ಗೊತ್ತಿಲ್ಲದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳ ಗೋಳಾಟವಂತು ಯಾರು ಕೇಳದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಬಸನಗೌಡ ದದ್ದಲ್ ಸಾಹೇಬ್ರೆ ಮಾನ್ವಿ ತಾಲೂಕಿನ ಸೀಕಲ್ ಗ್ರಾಮದ ವಿದ್ಯಾರ್ಥಿಗಳ ಗೋಳಾಟ ಕೇಳುವಿರಾ ಅಥವಾ ಈ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಬಸ್ ಬಿಡುವಿರಾ ಎಂಬುದು ವಿದ್ಯಾರ್ಥಿಗಳ ಮನವಿಯಾಗಿದೆ.
ತಾಲೂಕ ವರದಿಗಾರರು. ಸಿಹಿ ಕಹಿ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್. ಭಾಷಾ.ನಕ್ಕುಂದಿ.ಮಾನ್ವಿ