ದಕ್ಷಿಣೇಶ್ವರದ ಶ್ರೀಭವತಾರಿಣಿ ಕಾಳಿ ದೇವಸ್ಥಾನ ನಿರ್ಮಾಣದಲ್ಲಿ ರಾಣಿ ರಾಸಮಣಿಯ ಕೊಡುಗೆ ಅನುಪಮವಾದದ್ದು – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ಸ.10

ಅವತಾರ ವರಿಷ್ಠಾ ರಾದ ಶ್ರೀರಾಮಕೃಷ್ಣ ಪರಮಹಂಸರ ಲೀಲಾ ಕ್ಷೇತ್ರವಾದ ಪಶ್ಚಿಮ ಬಂಗಾಳದ ದಕ್ಷಿಣೇಶ್ವರದ ಶ್ರೀಭವತಾರಿಣಿ ಕಾಳಿ ದೇವಸ್ಥಾನ ನಿರ್ಮಾಣದಲ್ಲಿ ರಾಣಿ ರಾಸಮಣಿಯು ಮಾಡಿರುವ ಸೇವೆ ಅನುಪಮವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ತಿಳಿಸಿದರು.

ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್ ಅವರ ತ್ಯಾಗರಾಜ ನಗರದ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ರಾಣಿ ರಾಸಮಣಿ” ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.

ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್, ಸರ್ವಮಂಗಳ ಶಿವಣ್ಣ, ಸೌಮ್ಯ ಪ್ರಸಾದ್, ಪ್ರಮೀಳಾ ಜಗದೀಶ್, ಪಂಕಜ ಚೆನ್ನಪ್ಪ, ನಂಜಮ್ಮ ಕೆಂಚಪ್ಪ, ಎಂ ಲಕ್ಷ್ಮೀದೇವಮ್ಮ, ಬಿ.ಟಿ ಗಂಗಾಂಬಿಕೆ ರವಿ ಇಂಜಿನಿಯರ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

