ಸೂಕ್ಷ್ಮವಾದ ಮಾನಸಿಕ ವಿದ್ಯಮಾನವೇ ಕಾವ್ಯ – ಖ್ಯಾತ ಇತಿಹಾಸ ಸಂಶೋಧಕ ಡಾ, ಬಿ.ರಾಜಶೇಖರಪ್ಪ.
ಚಿತ್ರದುರ್ಗ ಸ.10

ಕಾವ್ಯ ಓದಿದಾಗ ಅದರ ಚಿತ್ರ ಮರು ಮೂಡಬೇಕು. ಸೂಕ್ಷ್ಮವಾದ ಮಾನಸಿಕ ವಿದ್ಯಮಾನವೇ ಕಾವ್ಯ ಎಂದು ಚಿತ್ರದುರ್ಗದ ಖ್ಯಾತ ಇತಿಹಾಸ ಸಂಶೋಧಕರಾದ ಡಾ, ಬಿ.ರಾಜಶೇಖರಪ್ಪ ತಿಳಿಸಿದರು.

ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಮತ್ತು ರೋಟರಿ ಕ್ಲಬ್ ಚಿತ್ರದುರ್ಗ ಇವುಗಳ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ 19 ನೇ. ವಾರ್ಷಿಕೋತ್ಸವ ಹಾಗೂ ವೈದ್ಯೆ ಡಾ, ಆರ್ ಗೌರಮ್ಮನವರ ಚೊಚ್ಚಲ ಕೃತಿ “ಕಾವ್ಯದೀಪ” ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಕೃತಿಯ ಕುರಿತು ಪರಿಚಯ ಮಾಡುತ್ತ ಮಾತನಾಡಿದರು. ಸಾಹಿತ್ಯ ಯಾರಿಗೂ ಮೀಸಲಲ್ಲ. ಅದು ಎಲ್ಲರಿಗೂ ಸೇರಿದ್ದು. ಡಾ, ಆರ್ ಗೌರಮ್ಮನವರು ಪ್ರಾಸದ ತ್ರಾಸವಿಲ್ಲದೆ ಭಾವನಿಷ್ಠಾವಾಗಿ ಅತ್ಯಂತ ಸೊಗಸಾಗಿ ಕವನಗಳನ್ನು ರಚಿಸಿದ್ದಾರೆ ಎಂದು ಅವರನ್ನು ಶ್ಲಾಘಿಸಿದರು.

ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು,101 ಬಾರಿ ರಕ್ತದಾನಿ ಖ್ಯಾತಿಯ ಡಾ, ಟಿ.ತ್ಯಾಗರಾಜ್ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಕೆ ರಹಮತ್ ವುಲ್ಲಾ, ಹಿರಿಯ ಪತ್ರಕರ್ತರಾದ ಜಿ.ಎಸ್ ಉಜ್ಜಿನಪ್ಪ, ಉಡುಪಿಯ ಚನ್ನಬಸವ ಪುತ್ತೂರ್ಕರ್, ಜಿ.ಎನ್ ಮಲ್ಲಿಕಾರ್ಜುನ, ಡಾ, ಆರ್ ಗೌರಮ್ಮ, ಗಾಯತ್ರಿ ಶಿವರಾಂ, ಶಫೀವುಲ್ಲಾ, ಮಾತನಾಡಿದರೆ ಚಿತ್ರದುರ್ಗ ರೋಟರಿ ಕ್ಲಬ್ ನ ಅಧ್ಯಕ್ಷರಾದ ದಿಲ್ ಶಾದ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾವತಿ ಪುತ್ತೂರ್ಕರ್ ಮಾತನಾಡಿದರೆ ಮಮತಾ ಕೆ.ಎಚ್ ಪ್ರಾರ್ಥಿಸಿದರು.
ಡಾ, ನವೀನ್ ಬಿ.ಸಜ್ಜನ್ ಸ್ವಾಗತಿಸಿದರೆ ಮಹಮದ್ ಸಾದತ್ ವಂದಿಸಿದರು. ಆಕಾಶವಾಣಿಯ ಡಾ, ನವೀನ್ ಮಸ್ಕಲ್ ಸೊಗಸಾಗಿ ನಿರೂಪಿಸಿದರು.
ಸಮಾರಂಭದಲ್ಲಿ ಶಿವರುದ್ರಮ್ಮ, ಕೆ.ಎಸ್ ತಿಪ್ಪಮ್ಮ, ಉಷಾರಾಣಿ, ಶಾರದಾ ಜೈರಾಮ್, ವಿನಾಯಕ, ಬೆಳಕುಪ್ರಿಯ ಡಾ, ಬಸವರಾಜ್ ಹರ್ತಿ, ಯತೀಶ್.ಎಂ ಸಿದ್ದಾಪುರ, ಸತೀಶ್ ಕುಮಾರ್, ತಿಪ್ಪೀರಮ್ಮ ಸಕಲಾಪುರದಟ್ಟಿ, ಶೋಭಾ, ಮೀರಾ ನಾಡಿಗ್, ಮುರಳೀಧರ್ ಬಿ.ವೇದಮೂರ್ತಿ ಸೇರಿದಂತೆ ಕವಯಿತ್ರಿ ಗೌರಮ್ಮನವರ ಕುಟುಂಬದವರು ಮತ್ತು ಸಾಕಷ್ಟು ಸಂಖ್ಯೆಯ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.