ಸೆಪ್ಟೆಂಬರ್ 12 ಮತ್ತು 13 ರಂದು ಮಾತೆ ಮರಿಯಮ್ಮಳ – ಜಾತ್ರಾ ಮಹೋತ್ಸವ.
ಮಾನ್ವಿ ಸ.11




ತಾಲೂಕಲ್ಲಿಯೇ ಪ್ರಸಿದ್ಧಿ ಪಡೆದ ಕೋನಾಪುರ ಪೇಟೆಯಲ್ಲಿರುವ ಮಾತೆ ಮರಿಯಮ್ಮನವರ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿದ್ದು, ಸರ್ವರೂ ಭಾಗವಹಿಸಬೇಕು ಎಂದು ಫಾದರ್ ವಿನ್ಸೆಂಟ್ ಸುರೇಶ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿ, ಸೆಪ್ಟೆಂಬರ್ 9 ರಿಂದ ಈಗಾಗಲೇ ಧ್ವಜಾರೋಹಣ ಸೇರಿದಂತೆ ನಾನಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಪ್ರತಿ ವರ್ಷವೂ ಭಕ್ತರು ಆಗಮಿಸಿ ಮಾತೆ ಮರಿಯಮ್ಮನವರ ಆಶೀರ್ವಾದ ಪಡೆದು ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಮಾತೆ ಮರಿಯಮ್ಮನವರ ಜಾತ್ರಾ ಮಹೋತ್ಸವಕ್ಕೆ ಫಾದರ್ ಗಳು ಸೇರಿದಂತೆ ನಮ್ಮ ಧರ್ಮ ಕೇಂದ್ರದ ನಾನಾ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಜೊತೆಗೆ ಎಲ್ಲಾ ಸಮಾಜದವರು ಭಾಗವಹಿಸಲಿದ್ದಾರೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾನಕ್ಕುಂದಿ.ಮಾನ್ವಿ