ಶಿಕ್ಷಕರನ್ನು ಗೌರವಿಸುವ – ಪರಂಪರೆಯನ್ನು ಬೆಳಸೋಣ.
ಬೇವೂರ ಸ.11





ಭಾರತ ಕಂಡ ಸರ್ವಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಡಾ, ರಾಧಾಕೃಷ್ಣನ್ ಅವರು ಜಗತ್ತಿಗೆ ಮಾಧರಿ ಯಾಗುವಂತಹ ಆದರ್ಶ ಪುರುಷರಾಗಿದ್ದಾರೆ. ಅವರು ಗುರು ಪರಂಪರೆಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು. ಇಂದಿನ ವಿದ್ಯಾರ್ಥಿ ಸಮೂಹ ಶಿಕ್ಷಕರನ್ನು ಗೌರವಿಸುವ ಪರಂಪರೆಯತ್ತ ಹೆಜ್ಜೆ ಹಾಕಬೇಕಿದೆ. ಆ ಗೌರವ ವೃದ್ಧಿಸುವ ಪರಂಪರೆಯನ್ನು ಎಲ್ಲರೂ ಬೆಳಸೋಣ ಎಂದು ವಿಶ್ರಾಂತ ಪಾಚಾರ್ಯ ಬಿ.ಬಿ. ಬೇವೂರ ಹೇಳಿದರು. ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಶಿಕ್ಷಕ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪಿ.ಎಸ್.ಎಸ್ ಕಲಾ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಎಸ್.ಎಸ್ ಆದಾಪೂರ, ಗುರುಗಳ ಋಣವನ್ನು ತೀರಿಸಲು ವಿದ್ಯಾರ್ಥಿಗಳು ಸಾಧಕರಾಗಿ ಬೆಳೆಯಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷ್ಯತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ, ಜಗದೀಶ ಗು. ಭೈರಮಟ್ಟಿ ಭಾರತದ ಗುರು ಶಿಷ್ಯ ಪರಂಪರೆಯಲ್ಲಿ ಅಡಗಿದ ತಾತ್ವಿಕ ವಿಚಾರಗಳು ಬೆರಗು ಮೂಡಿಸುತ್ತವೆ. ಗುರುವನ್ನು ಮೀರಿಸುವ ಶಿಷ್ಯರು ಬೆಳೆದಾಗ ಗುರು ಸಂಭ್ರಮಿಸುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಂಡಿವಡ್ಡರ ಅವರನ್ನು ಅರ್ಥಶಾಸ್ತ್ರ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು. ಫಾತಿಮಾ ನಧಾಪ ಸಂಗಡಿಗರು ಪ್ರಾರ್ಥಿಸಿದರು. ಪವಿತ್ರಾ ಮಾಗನೂರ ಬಿಂಧು ಡೋಣಿ ನಿರೂಪಿಸಿದರು. ಜ್ಯೋತಿ ಗೌಡರ, ನಿರ್ಮಲಾ ಡೋಣಿ ಪ್ರಶಸ್ತಿ ವಿತರಣೆ ಪುಷ್ಪ ಸಮರ್ಪಣೆ ನೆರವೇರಿಸಿದರು. ಸೌಮ್ಯ ಸಜ್ಜನರ ವಂದಿಸಿದರು. ಶಿವಲೀಲಾ ಗೊರಚಿಕ್ಕನವರ, ವಿಠಲ್ ನಾಗರಾಳ, ಬಸಯ್ಯ ಗಣಾಚಾರಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು. ಕನ್ನಡ ಸಂಘ ಸಂಚಾಲಕ ಡಾ. ಎಸ್. ಬಿ. ಹಂಚಿನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್ ಹಾಗೂ ಕ್ರೀಡಾ ವಿಭಾಗದ ಸಂಯೋಜನಾಧಿಕಾರಿ ಜಿ.ಎಸ್ ಗೌಡರ, ಎಸ್.ಸಿ ಎಸ್.ಟಿ ಕೋಶ ಘಟಕದ, ಸ್ಕೌಟ್ಸ ಹಾಗೂ ಗೈಡ್ಸ ವಿಭಾಗದ ಸಂಚಾಲಕ ಕಾಯದರ್ಶಿ ಡಿ.ವಾಯ್. ಬುಡ್ಡಿಯವರ, ಸಾಂಸ್ಕೃತಿಕ ಹಾಗೂ ಐ.ಕ್ಯೂ.ಎ.ಸಿ ಘಟಕದ ಸಂಯೋಜಕ ಡಾ. ಎ.ಎಮ್. ಗೊರಚಿಕ್ಕನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರು ಸ್ಮರಣೆಯ ಹಾಡಿನೊಂದಿಗೆ ಡಾ. ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾಲೇಜಿನ ಗುರುವೃಂದದವರ ಭಾವಚಿತ್ರಗಳ ಸ್ಮರಣಿಕೆ ನೀಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ವರದಿ:ಅಮರೇಶ.ಮ ಗೊರಚಿಕ್ಕನವರ
ಕೂಡಲಸಂಗಮ.