ಶ್ರೀಮಾತೆ ಶಾರದಾದೇವಿಯವರ ಸಹನಾ ಶೀಲತೆ ನಮ್ಮೆಲ್ಲರಿಗೆ ಮಾದರಿಯಾಗಲಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅನಿಸಿಕೆ.
ಚಳ್ಳಕೆರೆ ಸ.11





ಶ್ರೀಮಾತೆ ಶಾರದಾದೇವಿಯವರ ಸಹನಾಶೀಲತೆ ನಮ್ಮೆಲ್ಲರ ನಿತ್ಯ ಜೀವನಕ್ಕೆ ಮಾದರಿಯಾಗಲಿ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶಿವನ ಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಅವರು ಮಾತನಾಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಸತ್ಸಂಗ ಸಭೆಯಲ್ಲಿ ಸದ್ಭಕ್ತರಾದ ಶ್ರೀಮತಿ ಬಿ.ಸುಮನಾ ಕೋಟೇಶ್ವರ, ಸರಸ್ವತಿ ,ರಶ್ಮಿ ರಮೇಶ್, ವಿಜಯಲಕ್ಷ್ಮೀ ರಾಮರೆಡ್ಡಿ, ರಶ್ಮಿ ವಸಂತ, ದ್ರಾಕ್ಷಾಯಣಿ ವಿಜಯೇಂದ್ರ, ಸರಸ್ವತಿ, ಯತೀಶ್ ಎಂ ಸಿದ್ದಾಪುರ, ಕೃಷ್ಣವೇಣಿ ವೆಂಕಟೇಶ್, ಸೌಮ್ಯ ಪ್ರಸಾದ್, ಭ್ರಮರಂಭಾ ಮಂಜುನಾಥ, ಜಯಶೀಲಮ್ಮ, ನಾಗರತ್ನಮ್ಮ, ಶಾರದಾಮ್ಮ, ಗೀತಾಲಕ್ಷ್ಮೀ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.