“ಜೀವನ ಪಯಣದ ಶುಭ ಘಳಿಗೆಮುತ್ತು ರತ್ನಗಳ ಹೊಳಪು”…..

ಮಮತೆಗೆ ತಾಯಿ ಧೈರ್ಯದವ ತಂದೆ
ಹಿರಿಯರು ನಿಜ ಹೊನ್ನ ಕಳಸ ಛಾಯೆ
ಮೋಸಕ್ಕೆ ಕಂಸ ನ್ಯಾಯಕ್ಕೆ ಹಂಸ
ನೀತಿಗೆ ಚಾಣಕ್ಯ ಮಾತಿಗೆ ಮಾಣಿಕ್ಯ
ಮೌನ ಉತ್ತಮ ಉತ್ತರ ಪ್ರಶ್ನೆ ಜ್ಞಾನದ ಬೆಳಕು
ನಗು ದಿವ್ಯೌಷಧ ಸಮದಾನ ಶ್ರೇಷ್ಠ ದಾನವು
ಖುಷಿ ಕ್ಷಣವು ನಿಜ ಸಿರಿ ಜ್ಞಾನ ಕದಿಯದ
ಸಿರಿಯು
ಕಷ್ಠ ನಷ್ಟದ ಸಿಹಿ ಅನುಭವ ಸುಖ ದುಃಖ
ಸವಿ ಅಮೃತವು
ಕೀರ್ತಿಗೆ ಆರತಿ ಪ್ರೀತಿಗೆ ಸಾರಥಿ ಪಾರಿವಾಳವು
ಸ್ವಭಾವ ಗುಣಕ್ಕೆ ಶ್ರೀರಾಮ ಸಹೋದರತ್ವಕ್ಕೆ
ರಾಮ ಲಕ್ಷ್ಮಣರು
ಧರ್ಮಕ್ಕೆ ದಯಾಗುಣವು ದಾನಕ್ಕೆ ಕರ್ಣನು
ದಬ್ಬಾಳಿಕೆ ಅಜ್ಞಾನಿಯ ಅಶ್ತ್ರ ನಾನೇ
ಶ್ರೇಷ್ಠತನ
ದಭಾವ ನಿಜ ದಾನವನು
ಸಂತೃಪ್ತಿ ನೆಮ್ಮದಿ ನಮ್ಮತನದ ಸಿರಿ
ತೋರಿಕೆಯ
ಕಲೆ ನಿನ್ನ ನಿಚತನವು
ಜೀವನ ಪಯಣದ ಶುಭ ಘಳಿಗೆ
ಮುತ್ತು ರತ್ನಗಳ ಹೊಳಪು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ