ಸರಕಾರಿ ಪ್ರೌಢ ಶಾಲೆಯ ಶಿಕ್ಷಕನ ಕೈಯಲ್ಲಿ – ಅರಳಿದ ಶಿಷ್ಯನ ಭಾವ ಚಿತ್ರ.
ಕಂದಗಲ್ಲ ಸ.13







ಮನುಷ್ಯ ಜೀವನದ ಉತ್ತಮ ರೂಪ ಸಂಸ್ಕೃತಿ, ಸಂಸ್ಕೃತಿಯ ಉತ್ತಮ ರೂಪ ಕಲೆ, ಚಿತ್ರಕಲೆ ಶಿಲ್ಪಕಲೆ ದ್ರಶ್ಯಕಲೆ ಸೇರಿದಂತೆ ಮುಂತಾದ ಕಲೆಗಳು ಹೆಚ್ಚು ಪ್ರಧಾನ್ಯತೆ ಪಡೆದಿವೆ.ಬುದ್ದಿ ಜೀವಿಗಳದ್ದು ಆಲೋಚನೆ ಹೃದಯ ಜೀವಿಗಳದ್ದು ರಸಾನುಭವ ಎಂಬಂತೆ ಚಿತ್ರಕಲೆ ಒಂದು ವಿಶ್ವ ಭಾಷೆ, ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರ ಕಲೆಯ ಸವಿಯು ಸವಿದವನಿಗೆ ಗೊತ್ತು, ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ ಎನ್ನುವ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸೃಜನಶೀಲ ಚಿತ್ರಕಲಾ ಶಿಕ್ಷಕರಾದ ಎಸ್.ಎಸ್ ಗೌಡರ ರವರು ತಮ್ಮ ಪ್ರೀತಿಯ ಅಚ್ಚು ಮೆಚ್ಚಿನ ಶಿಷ್ಯ ಈ ಸಾರಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಕು. ಪ್ರಥ್ವಿರಾಜ.ವಿರೇಶ ಶಿಂಪಿ.



ಹಾಗೂ ಶ್ರೀಕಾಂತ ಹೆಸರೋರಮಠ ರವರ ಭಾವ ಚಿತ್ರವನ್ನು ಪೆನ್ಸಿಲನಿಂದ ಬಿಡಿಸಿ ಕಲೆಯ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಯಾವುದೇ ಚಿತ್ರವಿದ್ದರೂ ಅದನ್ನು ತಮ್ಮ ಕೈಯಲ್ಲಿ ಅದರಂತೆ ಬಿಡಿಸುವ ಸಾಮರ್ಥ್ಯ ಹೊಂದಿರುವ ಇವರು ಯಾವುದೇ ಕಾರ್ಯಕ್ರಮ ನಡೆದರೂ ಅದರಲ್ಲಿ ಇವರದೇ ಆದ ಹೊಸ ಆವಿಷ್ಕಾರ ಇರುತ್ತದೆ ಶಾಲೆಯಲ್ಲಿ ನಡೆಯುವ ಧ್ವಜಾರೋಹಣ, ಕ್ರೀಡಾಕೂಟ ಸಾoಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದಕ್ಕೆ ಸಂಬಂಧಿಸಿದ ಹೊಸ ದೊಂದು ಆವಿಷ್ಕಾರ ಇರುತ್ತದೆ.



ಚಿತ್ರ ಕಲೆಯನ್ನು ವಿನೂತನ ಮಾದರಿಯ ಹೊಸ ವಿನ್ಯಾಸ ದತ್ತ ಅರುಳಿಸುವುದು ಇವರ ಹವ್ಯಾಸ, ಚಿತ್ರ ಕಲೆಯಿಂದ ಇವರು ಕಂದಗಲ್ಲ ಗ್ರಾಮ ಹಾಗೂ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.ಸದಾ ಹಸನ್ಮುಖಿ ಯಾಗಿರುವ ಗೌಡರ ಗುರುಗಳಿಗೆ ಚಿತ್ರಕಲೆ ನೀರು ಕುಡಿದಷ್ಟೇ ಸುಲಭ, ಎಸ್.ಎಸ್ ಗೌಡರ್ ಗುರುಗಳನ್ನು ಶಾಲಾ ಅಭಿವೃದ್ಧಿ ಸಮಿತಿಯವರು ಎಲ್ಲಾ ಗುರುಗಳು ಕಂದಗಲ್ಲ ಗ್ರಾಮಸ್ಥರು ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಳಕಲ್