ಬುದ್ಧ ಬಸವ ಪೈಗಂಬರ್ ಹೇಳಿದ್ದು ಶಾಂತಿ ನೆಮ್ಮದಿ – ಶ್ರೀ ಗುರುಬಸವ ಮಹಾಸ್ವಾಮಿಜಿ.
ತರೀಕೆರೆ ಸ.13

ಕೋಮು ದ್ವೇಷದ ದಳ್ಳೂರಿನಲ್ಲಿ ಉರಿಯುತ್ತಿದೆ ಸಮಾಜ, ಮನುಷ್ಯನಿಗೆ ಬೇಕಾದ್ದು ಜ್ಞಾನ ಸಮಾಧಾನ ವಿವೇಚನೆ ಎಂದು ಶ್ರೀ ಗುರುಬಸವ ಮಹಾಸ್ವಾಮಿಗಳು ಹೇಳಿದರು ಅವರು ಇಂದು ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕವು ಏರ್ಪಡಿಸಿದ್ದ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಗನ್ ನಿಂದ ಮಾಡಲಾಗದ ಕೆಲಸ ಪೆನ್ನಿನಿಂದ ಮಾಡಲು ಸಾಧ್ಯ, ನ್ಯಾಯ ಸತ್ಯಮಾರ್ಗದಲ್ಲಿ ನಡೆಯಿರಿ ಎಂದು ಹೇಳಿದ ಯೇಸುವನ್ನು ಶಿಲುಬೆಗೆ ಏರಿಸಿದರು, ಪೈಗಂಬರ್ ರನ್ನು ಕಲ್ಲಿನಲ್ಲಿ ಹೊಡೆದರು ಬಸವಣ್ಣನವರನ್ನು ಓಡಿಸಿದರು ಗಾಂಧೀಜಿಯನ್ನು ಗುಂಡಿಟ್ಟು ಕೊಂದರು ಹಿಂಸೆ ಮಾರ್ಗವನ್ನು ಬಿಟ್ಟು ನ್ಯಾಯ ನೀತಿ ಧರ್ಮದ ಪರಿಪಾಲನೆಯಲ್ಲಿ ನಡೆಯಬೇಕು ನ್ಯಾಯವು ತಂದೆ ತಾಯಿಗಿಂತ ಶ್ರೇಷ್ಠವಾದದ್ದು. ಎಲ್ಲರೂ ಪ್ರೀತಿ ಬಾಂಧವ್ಯಗಳಿಂದ ಒಂದಾಗಬೇಕು. ಮನುಷ್ಯರಲ್ಲಿ ಭೇದಭಾವ ಇರಬಾರದು ದಯವಿಲ್ಲದ ಧರ್ಮವಿಲ್ಲ ಧರ್ಮದ ಮೂಲ ಆಧಾರವೇ ದಯೆ ಆಗಿರುತ್ತದೆ.ಪ್ರೀತಿ ವಿಶ್ವಾಸಗಳು ಇರಬೇಕು ಯಾವ ಧರ್ಮ ಅಹಿಂಸೆ ಪರವಾಗಿಲ್ಲ ಅದು ನಿಜವಾದ ಧರ್ಮವಾಗಿರುತ್ತದೆ ಆಕಾಶ ಒಂದೇ ನೀರು ಒಂದೇ ಗಾಳಿ ಒಂದೇ ಪರಮಾತ್ಮನು ಒಬ್ಬನೇ ನಾಮ ಹಲವು ಹಾಗಿದೆ, ಬುದ್ಧ ಬಸವ ಪೈಗಂಬರ್ ಹೇಳಿದ್ದು ಶಾಂತಿ ನೆಮ್ಮದಿಯ ಮಾರ್ಗವನ್ನು ಅದರಂತೆಯೇ ಬಾಳಬೇಕು ಎಂದು ಹೇಳಿದರು. ಸೀರತ್ ಪ್ರವಚನ ನೀಡಿದ ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾದ ಅಕ್ಬರ್ ಅಲಿ ರವರು ಮಾತನಾಡಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರು ಮಾನವ ಕಲ್ಯಾಣಕ್ಕಾಗಿ ಆಗಮಿಸಿದವರು ಮಾನವಿಯತೆ ನ್ಯಾಯ ನೀಡುವ ಮನುಷ್ಯನಾಗಬೇಕು ಎಂದು ಸೃಷ್ಟಿಕರ್ತ ಹೇಳಿದ್ದಾನೆ. ಮಾನವನಾಗಿ ಬಂದಮೇಲೆ ಜಾತಿ ಪಂಗಡಗಳನ್ನು ಮಾಡಿ ಕೊಂಡಿದ್ದಾರೆ ದೇವರು ಜಾತಿ ಪಂಗಡಗಳನ್ನು ಮಾಡಿಲ್ಲ ದೇವರನ್ನ ನಂಬಿದಲ್ಲಿ ಶ್ರೇಷ್ಠತೆ ಇದೆ,ಎಲ್ಲರೂ ಸಮಾನರು ಎಲ್ಲರಿಗೂ ಒಂದೇ ನ್ಯಾಯ ಎಲ್ಲ ಮನುಷ್ಯ ಕುಲವೊಂದೇ. ತಂದೆ ತಾಯಿ ಮಕ್ಕಳು ಹಿಂದೂ ಮುಸ್ಲಿಮರು ಪರಸ್ಪರ ಸಹೋದರರು ಸಮಸ್ತ ಪ್ರಾಣಿಗಳು ಮನುಷ್ಯನಿಗೂ ಸಹ ನ್ಯಾಯ ಒಂದೇ ವಿರಬೇಕು ಬೇರೆಯವರ ಕಣ್ಣೀರು ಒರೆಸುವವರಾಗಬೇಕು ಒಳಿತು ಮಾಡುವ, ಪ್ರೀತಿ ಮಾಡುವ ಮನುಷ್ಯರಾಗಿ ಬಾಳೋಣ ಎಂದು ಕರೆ ನೀಡಿದರು. ಸಂಘಟನೆಯ ಜಿಲ್ಲಾ ಸಂಚಾಲಕರಾದ ರಿಜ್ವಾನ್ ಖಾಲಿದ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸೆಪ್ಟೆಂಬರ 3 ರಿಂದ 14ರವರೆಗೆ ಸಿರತ್ ಪ್ರವಚನ ಕಾರ್ಯಕ್ರಮ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಆಚರಣೆ ಮಾಡಲಾಗುತ್ತಿದೆ.

1500 ವರ್ಷಗಳ ಹಿಂದೆ ಆಕಾರವಿಲ್ಲದೆ ಇದ್ದ ದೇವರು ಹೃದಯದಲ್ಲಿ ನೆಲೆಸಿದ್ದಾನೆ, 1450 ವರ್ಷಗಳ ಹಿಂದೆ ಪ್ರವಾದಿ ಮಹಮ್ಮದ್ ಪೈಗಂಬರ್ ರವರು ಲೋಕಕಲ್ಯಾಣಕ್ಕಾಗಿ ಆಗಮಿಸಿದರು ಅವರ ಪ್ರವಚನಗಳನ್ನು 76 ವರ್ಷಗಳಿಂದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ದೇಶದಲ್ಲಿ ಶಾಂತಿಯ ಸಂದೇಶ ಸಾರುವುತಿದೆ ಎಂದು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕುರಾನ್ ಪಟ್ಟಣ ಮಹಮ್ಮದ್ ಅಸಾದ್ ನೆರವೇರಿಸಿದರು, ಪೈಗಂಬರ್ ರವರ ಬಗ್ಗೆ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸೌಹಾರ್ದ ಗೀತೆಯನ್ನು ಹುಜೈಪ ಅಹಮದ್ ನೆರವೇರಿಸಿ, ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಹಾಗೂ ಉಪಾಧ್ಯಕ್ಷರಾದ ಪಾರ್ವತಮ್ಮ ತಿಮ್ಮಯ್ಯ ಮತ್ತು ತರೀಕೆರೆಯ ಸಂಘಟನೆಯ ಮುಖಂಡರಾದ ಸೈಯದ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಆದಿಲ್ ಪಾಷಾ ರವರು ಸ್ವಾಗತಿಸಿ, ಶೇಕ್ ಜಾವಿದ್ ರವರು ವಂದನಾರ್ಪಣೆ ಮಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು