ಖಾಕಿ ಪಡೆ ಕಳ್ಳತನ ಪ್ರಕರಣ ಭೇದಿಸಿ ಇಬ್ಬರು ಆರೋಪಿಗಳನ್ನು – ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಆಲಮೇಲ ಸ.13

29 ಏಪ್ರಿಲ್ 2025 ರಾತ್ರಿ 10 ಗಂಟೆ ಯಿಂದ 30 ಏಪ್ರಿಲ್ 2025 ಬೆಳಿಗ್ಗೆ 6 ಗಂಟೆಯ ನಡುವಿನ ಸಮಯದಲ್ಲಿ ಗಾಲಿಬ್ ಚನ್ನವೀರಪ್ಪ ಹಡಪದ್ ಮತ್ತು ಮಂಜುನಾಥ್ ಗುರುಶಾಂತಪ್ಪ ಬೊಗೊಂಡಿ, ಹಾಗೂ ರಾಜಕುಮಾರ್ ನಾಗಪ್ಪ ಕೋಣಶಿರಸಿಗಿ ಎಂಬುವರ ಮೂರು ಮನೆಗಳ ಕಳ್ಳತನವಾಗಿರುವ ಪ್ರಕರಣ ದಾಖಲಾಗಿದ್ದು ಮೂರು ಮನೆಗಳ ಕಳ್ಳತನ ಪ್ರಕರಣವನ್ನು ಖಾಕಿ ಪಡೆ ಭೇದಿಸಿದ್ದು ಇಬ್ಬರು ಕಳ್ಳರನ್ನು ಬಂಧಿಸಿ 10,69,500 ಕಿಮ್ಮತ್ತಿನ ಬೆಳ್ಳಿ ಬಂಗಾರ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ನೀಡಿದರ ಮೇರೆಗೆ ಆಲಮೇಲ ಪೊಲೀಸ್ ಠಾಣೆಯ ಗುನ್ನ ನಂಬರ್ 63/2025 ಕಲಂ 331 (4) 305 ಬಿ.ಎನ್.ಎಸ್ ಆಕ್ಟ್ 2023 ನೆದ್ದರ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಕಳ್ಳತನ ಮಾಡಿರುವ ಆರೋಪಿತರ ಪತ್ತೆ ಕುರಿತು ಶ್ರೀ ಲಕ್ಷ್ಮಣ್ ನಿಂಬರಗಿ ಪೊಲೀಸ್ ಅಧೀಕ್ಷಕರು ವಿಜಯಪುರ ಮತ್ತು ಶ್ರೀ ರಾಮನಗೌಡ ಹಟ್ಟಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶ್ರೀ ಜಗದೀಶ್ ಎಚ್.ಎಸ್ ಪೊಲೀಸ್ ಉಪಾಧೀಕ್ಷಕರು ಇಂಡಿ ಶ್ರೀ ನಾನಗೌಡ ಪೊಲೀಸ್ ಪಾಟೀಲ್ ಸಿ.ಪಿ.ಐ ಸಿಂದಗಿ ಇವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿ.

ಸದರ ತಂಡದಲ್ಲಿ ಶ್ರೀ ಅರವಿಂದ್ ಅಂಗಡಿ ಪಿ.ಎಸ್.ಐ ಆಲಮೇಲ ಮತ್ತು ಎಸ್.ಎಮ್ ಪಡಶೆಟ್ಟಿ ಪಿ.ಎಸ್.ಐ ಅಪರಾಧ ವಿಭಾಗ ಹಾಗೂ ಆಲಮೇಲ ಠಾಣೆ ಸಿಬ್ಬಂದಿಗಳಾದ ಎಚ್.ಟಿ ಗೋಟೆಕಾರ್, ಸಲೀಂ.ಸವದಿ, ಸಿದ್ದರಾಮ ಪಾಟೀಲ್, ಎಸ್.ಬಿ ಯತ್ನಾಳ್ ವ್ಹಿ.ಎಸ್ ಆಲೂರ್ ಎಸ್.ಎಸ್ ಜಲಗೇರಿ ಬಿ.ಎಸ್ ಮೆಡೆದಾರ್, ಬಿ.ಜಿ ಕ್ಷತ್ರಿ ಈ ಪ್ರಕರಣ ತನಿಖಾ ತಂಡವು ಪ್ರಕರಣದಲ್ಲಿ ವೈಜ್ಞಾನಿಕ ವಿಧಾನ ದಿಂದ ತನಿಖೆ ಮಾಡಿ ಆಲಮೇಲ ಪೊಲೀಸ್ ಠಾಣೆ ಗುನ್ನೆ ನಂಬರ್ 34/2024 ಕಲಂ 457, 380, 379 ಐಪಿಸಿ ಮತ್ತು 63/ 2025 ಕಲಂ 331 (4) 305 ಬಿ.ಎನ್ ಎಸ್ ಆಕ್ಟ್ 2023 ನೆಡ್ಡವುಗಳನ್ನು ಭೇದಿಸಿ ಕಳ್ಳತನ ಮಾಡಿದ ಆರೋಪಿಗಳಾದ 1 ನೇ. ಶರಣಬಸು ತಂದೆ ಮಹಾದೇವಪ್ಪ ಜಾಲವಾದ್, 31 ವರ್ಷ ವಯಸ್ಸು 2 ನೇ. ಪ್ರಕಾಶ್ ತಂದೆ ನಿಂಗಪ್ಪ ಕಂಬಾರ್ ವಯಸ್ಸು 21 ವರ್ಷ ಈ ಇಬ್ಬರು ಚಿಕ್ಕರೋಗಿ ತಾಲೂಕು ದೇವರ ಹಿಪ್ಪರಗಿ ಜಿಲ್ಲೆ ವಿಜಯಪುರ ಇವರಿಂದ ಅಂದಾಜು 86 ಗ್ರಾಂ ಬಂಗಾರದ ಆಭರಣವನ್ನು ಮತ್ತು 67 ಗ್ರಾಂ ಬೆಳ್ಳಿ ಆಭರಣವನ್ನು ಹಾಗೂ ಐದು ಮೋಟಾರ್ ಸೈಕಲ್ ಗಳನ್ನು ವಶಪಡಿಸಿ ಕೊಂಡಿರುತ್ತಾರೆ ಆರೋಪಿಯನ್ನು ಬಂಧಿಸಿದ ಹಾಗೂ ಚುರುಕತನ ದಿಂದ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಶ್ರೀ ಲಕ್ಷ್ಮಣ್ ನಿಂಬರಗಿ ಪೊಲೀಸ್ ಅಧಿಕ್ಷಕರು ವಿಜಯಪುರ ಅವರು ಶ್ಲಾಘಸಿರುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

