ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ನಮೂದಿಸಿ – ಚನ್ನಪ್ಪ ವಿಶ್ವಕರ್ಮ.
ಸಿಂಧನೂರು ಸ.14

ಇದೇ ಸೆಪ್ಟೆಂಬರ್ 22 ರಿಂದ ಆರಂಭವಾಗುವ ಜಾತಿ ಜನಗಣತಿ ಸಮೀಕ್ಷೆ ವೇಳೆ ವಿಶ್ವಕರ್ಮ ಸಮಾಜದವರು ಜಾತಿ ಕಾಲಂನಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಸಬೇಕು ಎಂದು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ಸಂಘಟನಾ ಕಾರ್ಯದರ್ಶಿ ಚನ್ನಪ್ಪ ವಿಶ್ವಕರ್ಮ ಕೆ.ಹೊಸಹಳ್ಳಿ ತಿಳಿಸಿದರು.ವಿಶ್ವಕರ್ಮ ಸಮಾಜದಲ್ಲಿ 40 ಉಪ ಜಾತಿಗಳಿವೆ. ಪಂಚ ಕುಲ ಕಸುಬುಗಳನ್ನು ಮಾಡುವವರೆಲ್ಲರೂ ವಿಶ್ವಕರ್ಮರು ಗಣತಿಯಲ್ಲಿ ಉಪ ಜಾತಿಗಳನ್ನು ನಮೂದಿಸ ಬಾರದು. ರಾಜ್ಯ ಸರ್ಕಾರವು ಜಾತಿ ಗಣತಿಯ ಮರು ಸಮೀಕ್ಷೆ ನಡೆಸಲು ಮುಂದಾಗಿದೆ. ಎಲ್ಲಾ ಸಮಾಜದವರು ಜಾಗೃತಾರಾಗಿದ್ದು, ನಮ್ಮ ಸಮಾಜದವರೂ ಜಾಗೃತರಾಗ ಬೇಕು. ಸಮೀಕ್ಷೆ ವೇಳೆ ಬಡಿಗೇರ, ಕಮ್ಮಾರ, ಅಕ್ಕಸಾಲಿಗ, ಪತ್ತಾರ ಹೀಗೆ ಉಪ ಜಾತಿಗಳನ್ನು ಬರೆಸದೆ ಎಲ್ಲರೂ ಒಂದೇ ರೀತಿಯಾಗಿ ಹಿಂದೂ ವಿಶ್ವಕರ್ಮ ಎಂದು ಬರೆಯಸ ಬೇಕು ಎಂದು ಸಮಾಜದ ಬಂಧುಗಳಲ್ಲಿ ಮನವಿ ಮಾಡಿದರು ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಮಾಡಿ ವಿನಂತಿಸಿ ಕೊಂಡಿದ್ದಾರೆ.