ಅನುದಾನಿತ ಶಾಲಾ ಕಾಲೇಜುಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ – ತಹಶೀಲ್ದಾರರಿಗೆ ಮನವಿ ಸಲ್ಲಿಕೆ.
ಹುನಗುಂದ ಜು. 06

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಒಪಿಎಸ್ ಜಾರಿ ಗೊಳಿಸುವುದು ಮತ್ತು ಜ್ಯೋತಿ ಸಂಜೀವಿನಿ ಯೋಜನೆಯನ್ನು ನೀಡುವುದು ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಅನುದಾನಿತ ಶಾಲಾ ಕಾಲೇಜುಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಶನಿವಾರ ಗ್ರೇಡ್-೨ ತಹಶೀಲ್ದಾರ ಮಹೇಶ ಸಂದಿಗವಾಡ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ತಾಲುಕಾಧ್ಯಕ್ಷ ಎಸ್.ಎಸ್.ಹಿರೇಮಠ ಮಾತನಾಡಿ ೨೦೦೬ ಕ್ಕಿಂತ ಮುಂಚೆನೇ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿಗೊಂಡು ೨೦೦೯ ರ ಈಚಗೆ ಅನುದಾನಕ್ಕೊಳ್ಳಪಟ್ಟ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಇಲ್ಲಿವರಿಗೂ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ವ್ಯವಸ್ಥೆಗಳಿಲ್ಲ.ಸರ್ಕಾರಿ ಮತ್ತು ಅನುದಾನಿತ ನೌಕರರಿಗೆ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹಳೆಯ ಪಿಂಚಣೆ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಬೇಕು. ೨೦೦೬ ಕ್ಕಿಂತ ಪೂರ್ವದಲ್ಲಿ ನೇಮಕಾತಿಗೊಂಡ ಅನುದಾನಿತ ಶಾಲೆ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಮತ್ತು ೨೦೦೯ ನಂತರ ನೇಮಕಾತಿಗೊಂಡ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಹೊಸ ಪಿಂಚಣೆಯನ್ನು ಜಾರಿ ಮಾಡಬೇಕು.ಸರ್ಕಾರಿ ನೌಕರರಿಗೆ ಸಿಗುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲಾ ಕಾಲೇಜು ನೌಕರರಿಗೆ ನೀಡಬೇಕು.ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿ ಮತ್ತು ನೌಕರರಿಗೆ ಯಾವದೇ ರೀತಿಯ ತಾರತಮ್ಯ ಮಾಡಬಾರದು.ಈ ಎಲ್ಲ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಗಂಗಾಧರ ಲೂತಮಠ,ವಿ.ಎಚ್. ದೇವರಡ್ಡಿ, ಡಿ.ಎಸ್.ಪಂಚಾಳ, ಎ.ಟಿ.ಮೂಲಮನಿ, ಎನ್.ಎಸ್.ಹೂಲಗೇರಿ, ಎಸ್.ಪಿ.ಮಲ್ಲಪ್ಪನವರ, ಆರ್.ಎ.ಕರ್ಣ. ಎಂ.ಎ.ಕೆಸರಭಾವಿ, ವೀಣಾ.ಜಿ.ವಿ. ಎಚ್.ಚವ್ಹಾಣ, ಎಚ್.ಟಿ.ಹೊಸಮನಿ, ಡಿ.ಕೆ.ಶಿನ್ನೂರ, ಪಿ.ಎನ್.ಸೂಳೇಭಾವಿ, ಆರ್.ಎಸ್.ಜಾಲಿಹಾಳ, ಎ.ಸಿ.ಅತ್ತಾರ, ಡಿ.ಎಸ್.ಅಂಗಡಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.